ಆರೋಗ್ಯದ ಕಾಳಜಿ ವಹಿಸುವುದು ಅಗತ್ಯ

12 MANJU 02
Published on

ಹೊಸಪೇಟೆ: ಅಂಜುಮನ್ ಖಿದ್ಮತೆ ಇ ಇಸ್ಲಾಂ ಕಮಿಟಿಯಿಂದ ಶಾದಿಮಹಲ್ ಆವರಣದಲ್ಲಿ ಮೂತ್ರಪಿಂಡ, ಹೃದಯರೋಗ, ನರರೋಗ, ಕ್ಯಾನ್ಸರ್ ಹಾಗೂ ಇತರೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅತ್ಯಾಧುನಿಕ ಯುಗದಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಾಳಜಿ ವಹಿಸಬೇಕು. ಆರೋಗ್ಯದ ಮಹತ್ವವನ್ನು ಅರಿಯದೆ ನಿರ್ಲಕ್ಷವನ್ನು ಮಾಡಿದರೆ ಆರೋಗ್ಯ ಮರಳಿ ಪಡೆಯಲು ಸಾದ್ಯವಿಲ್ಲ. ಆದ್ದರಿಂದ ಆರೋಗ್ಯದ ಮೇಲೆ ಜಾಗೃತರಾಗಿರಬೇಕು. ಶಿಬಿರದ ನಂತರ ಹೆಚ್ಚಿನ ಚಿಕಿತ್ಸೆಗೆ ಅವಶ್ಯಕತೆ ಇದ್ದರೆ ಬಿ.ಪಿ.ಎಲ್. ಕಾರ್ಡ್, ಆರೋಗ್ಯ ಕಾರ್ಡ್, ಂiÀiಶಸ್ವಿನಿ ಕಾರ್ಡ್ ಇನ್ನಿತರೆ ಕಾರ್ಡ್ ಗಳಿದ್ದಲ್ಲಿ ಬೆಂಗಳೂರಿನಲ್ಲಿ ತಪಾಸಣೆ ಮಾಡಲಾಗುವುದು. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಎಮ್.ಫೈರೋಜ್ ಖಾನ್, ಅನ್ಸರ್ ಭಾಷ. ಡಾ.ದುರ್ವೇಶ್ ಮುಯೂದ್ದೀನ್, ಅಬ್ದುಲ್ ಖಾದರ್ ರಫಾಯಿ, ಬೆಂಗಳುರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ.ಶುಭೋದಯ, ಶ್ರಿಯಾ ಗೊಲ್ಲಮೊವಿ, ಡಾ.ಮೊಹಮ್ಮದ್ ಜುನೆದ್, ಡಾ.ಪ್ರತೀಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net