ಮಹಾವೀರ ಹನುಮ ಹಾಡು ಮರು ಬಿಡುಗಡೆ

10 MANJU 07
Published on

ಹೊಸಪೇಟೆ: ಅಂಜನಾದ್ರಿ ಬೆಟ್ಟದಲ್ಲಿ ಚಿತ್ರೀಕರಿಸಿರುವ ಮಹಾವೀರ ಹನುಮ ದೃಶ್ಯಮಾಲಿಕೆಯನ್ನು ಏ.12ರಂದು ಮರು ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ರಾಘವ ಸೂರ್ಯ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ ಬಿಡುಗಡೆಗೊಳಿಸಿರುವ ಮಹಾವೀರ ಹನುಮನ, ನಮ್ಮ ಹನುಮ ಎನ್ನು ದೃಶ್ಯಮಾಲಿಕೆ ಎ2 ಮ್ಯೂಸಿಕ್ ಚಾನೆಲ್ ನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದಿದೆ. ಏ.12ರಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಮರು ಪ್ರದರ್ಶಿಸಲು ಇಚ್ಛಿಸಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಪ್ರದರ್ಶಿಸಲಾಗುವುದು. ಇದೇ ವೇಳೆ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಗುವುದು. ಎಲ್ಲರೂ ಈ ಹಾಡನ್ನು ವೀಕ್ಷಿಸಿ, ಹೆಚ್ಚಿನ ಭಕ್ತರಿಗೆ ತಲುಪಿಸಬೇಕು ಎಂದು ಕೋರಿದರು.

ಪೂಜ್ಯಾಯ ಫಿಲಿಮ್ಸ್ ನಿರ್ಮಾಣ, ರಾಘವ ಸೂರ್ಯ ಫಿಲಿಮ್ಸ್ ಸಹಯೋಗ ಹಾಗೂ ರಾಘವ ಸೂರ್ಯ ರಚನರ ಮತ್ತು ನಿರ್ದೇಶನದಲ್ಲಿ ಋತು ಸ್ಪರ್ಶ, ರೋಹಿತ್, ರಾಜ್, ಜೀವನ್, ಪ್ರಿಯಾ, ಭಟ್ ನಟಿಸಿದ್ದಾರೆ. ಸಾಯಿ ಸರ್ವೇಶ್ ಸಂಗೀತ ನಿರ್ದೇಶನ, ರಾಘವ ಸೂರ್ಯ ಸಾಹಿತ್ಯ, ಕಂಬಿ ರಾಜು ನೃತ್ಯ ಸÀಂಯೋಜನೆ, ರಮೇಶ್ ಕುಮಾರ್ ಕಲಾನಿರ್ದೇಶನ, ಹೆರಗು ಪುಟ್ಟರಾಜು ವಸ್ತ್ರಾಲಂಕಾರ, ಸಿದ್ಧು ವರ್ಣಾಲಂಕಾರ ಮಾಡಿದ್ದಾರೆ. ತಂಡವನ್ನು ಬೆಂಬಲಿಸಬೇಕು ಎಂದರು.

ನಗರದ ಸ್ಥಳೀಯ ಹುಲಿಗೆಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net