ಅಂಗವಿಕಲ ಏಳಿಗೆಗೆ ಎಲ್ಲರೂ ಕೈ ಜೋಡಿಸೋಣ

27 MANJU 01
Published on

ಹೊಸಪೇಟೆ: ವಿಕಲಚೇತನರಿಗೆ ಸಮಾನ ಹಕ್ಕುಗಳು, ಸೌಕರ್ಯಗಳು, ಮತ್ತು ಅವಕಾಶಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಅವರು ತಮ್ಮ ಬದುಕಿನಲ್ಲಿ ಸ್ವಾವಲಂಭಿಯಾಗಿಸಲು ಸರ್ಕಾರ ಮಾತ್ರವಲ್ಲದೇ ಸಂಘ-ಸAಸ್ಥೆಗಳು, ಸಾರ್ವಜನಿಕರು ಅವರೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ವಿಕಲಚೇತನರ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ತಮ್ಮ ಪ್ರತಿಭೆ ಗುರುತಿಸಲು ಸೂಕ್ತವಾದ ಪರಿಸರ ಕಲ್ಪಿಸಬೇಕು. ವಿಕಲಚೇತನರನ್ನು ಕೇವಲ ಸಹಾನುಭೂತಿ ದೃಷ್ಟಿಯಿಂದ ನೋಡುವುದನ್ನು ಬಿಟ್ಟು, ಅವರನ್ನು ಸಮಾನ ಹಕ್ಕುದಾರರು ಮತ್ತು ನಮ್ಮ ಸಮಾಜದ ಬಹುಮುಖ್ಯ ಅಂಗವೆAದು ಪರಿಗಣಿಸಬೇಕು. ವಿಕಲಚೇತನರ ಪ್ರತಿಭೆಯನ್ನು ಗುರುತಿಸಿಲು ವರ್ಷಕ್ಕೆ ಒಂದು ಭಾರಿಯಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂಗವಿಕಲ ಮಕ್ಕಳಿಗೆ ಹಾಗೂ ವಯಸ್ಕರಿಗೆ ವಿಶೇಷ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ನೀಡುವ ಮೂಲಕ, ಅವರಲ್ಲಿ ಆತ್ಮವಿಶ್ವಾಸ ಬೆಳೆಸುತ್ತಿರುವ ಸಂಘ-ಸAಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ದೈಹಿಕ ಅಂಗವಿಕಲರಿಗೆ ಗುಂಡು ಎಸೆತ, ಜಾವಲಿನ್ ಥ್ರೋ, ಬಗಲುಗೋಲು ಓಟ. ದೃಷ್ಟಿದೋಷವುಳ್ಳವರಿಗೆ ಕೇನ್ ರೇಸ್, ಗುಂಡು ಎಸೆತ. ಶ್ರವಣ ದೋಷವುಳ್ಳವರಿಗೆ 100 ಮೀಟರ್ ಓಟ, ಗುಂಡು ಎಸೆತ, ರಿಂಗ್ ಎಸೆತ. ಬುದ್ಧಿಮಾಂದ್ಯರಿಗೆ ಮ್ಯೂಜಿಕಲ್ ಚೇರ್ ಮತ್ತು ಚೆಂಡು ಎಸೆತ. ಮತ್ತು ಗುಂಪು ಕ್ರೀಡೆಗಳಲ್ಲಿ ಸ್ಟಾಂಡಿAಗ್ ಹಾಗೂ ಸಿಟ್ಟಿಂಗ್ ಕ್ರಿಕೇಟ್, ಕಬ್ಬಡ್ಡಿ ಸ್ಪರ್ಧೆಯನ್ನ ಮತ್ತು ಜಾನಪದ ಗೀತೆ, ಭಾವ ಗೀತೆ, ಚಿತ್ರಕಲಾ ಸ್ಪರ್ಧೆ, ಹಾಗೂ ಪ್ಯಾನ್ಸಿ ಡ್ರೆಸ್ (ವೇಷ ಭೂಷಣ) ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶ್ ಲಿಂಗ ಎಸ್.ಕೊಟಕಿಂಡಿ, ದೈಹಿಕ ಶಿಕ್ಷಣ ಮುಖ್ಯಸ್ಥ ಮಂಜುನಾಥ, ಭೂಮಿಕಾ ಟ್ರಸ್ಟ್ ಅಧ್ಯಕ್ಷ ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net