ಹಂಪಿಗೆ ಅಮೆರಿಕ ರಾಯಭಾರಿ ಭೇಟಿ: ಐತಿಹಾಸಿಕ ಸ್ಮಾರಕಗಳ ವೀಕ್ಷಿಸಿದ ಪಿ.ಎ.ಲ್ಯಾಸಿನಾ

26112021 Hospet Hampi visit to US Ambassador-Sri Sri Ravishankar guruji
Published on

ಹೊಸಪೇಟೆ: ಅಮೆರಿಕದ ರಾಯಭಾರಿ ಪೆಟ್ರೀಷಿಯಾ ಎ.ಲ್ಯಾಸಿನಾ, ಸ್ನೇಹಿತರೊಂದಿಗೆ ಶುಕ್ರವಾರ ಹಂಪಿಗೆ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದರು.

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇವಸ್ಥಾನ ಸಮಿತಿ ದೇಗುಲದ ಆನೆ ಲಕ್ಷ್ಮೀಯಿಂದ ಎ.ಲ್ಯಾಸಿನಾಗೆ ಹೂ ಮಾಲೆ ಹಾಕಿ ಸ್ವಾಗತಿಸಲಾಯಿತು. ಗರ್ಭಗುಡಿ ಹಿಂಭಾಗದಲ್ಲಿ ಬಿಷ್ಟಪ್ಪಯ್ಯ ಗೋಪುರ ನೆರಳಲ್ಲಿ ಉಲ್ಟಾ ಕಾಣಿಸುವುದನ್ನು ಕಂಡು ಅಂದಿನ ಕಾಲದ ವಿಜ್ಞಾನ-ತಂತ್ರಜ್ಞಾನಕ್ಕೆ ಮನಸೋತು ಅಚ್ಚರಿ ವ್ಯಕ್ತಪಡಿಸಿದರು.

ಪಂಪಾದೇವಿ ಭುವನೇಶ್ವರಿ ದೇವಿ ದರ್ಶನ ಪಡೆದು ದೇವಸ್ಥಾನದ ರಂಗಮಂಟಪದಲ್ಲಿನ ಚಿತ್ರಕಲೆ ಕಂಡು ಖುಷಿಪಟ್ಟರು. ಬಳಿಕ ಸಾಸಿವೆಕಾಳು ಗಣೇಶ, ಕಡಲೆಕಾಳು ಗಣೇಶ ಸ್ಮಾರಕಗಳನ್ನು ವೀಕ್ಷಿಸಿದರು. ಗೈಡ್ ಜಿ.ಮಂಜುನಾಥಗೌಡ ಮಾರ್ಗದರ್ಶನ ಮಾಡಿದರು. ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ವಿ.ಹಂಪಿ, ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದ್ದರು.

ರವಿಶಂಕರ ಗುರೂಜಿ ಭೇಟಿ: ಆಧ್ಯಾತ್ಮಿಕ ಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಶುಕ್ರವಾರ ಹಂಪಿಗೆ ಭೇಟಿ ನೀಡಿ ಶ್ರೀ ವಿರೂಪಾಕ್ಷೇಶ್ವರ ದರ್ಶನ ಪಡೆದರು. ಬಳಿಕ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net