ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಹಂಪಿಗೆ ಭೇಟಿ

7 HPT 3
Published on

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಮೂರುದಿನಗಳ ಕಾಲ ಹಂಪಿ ಪ್ರವಾಸ ಕೈಗೊಂಡಿರುವ ಸುಪ್ರಿಂಕೋರ್ಟ್ ನ್ಯಾಯಾಮೂರ್ತಿ ರವೀಂದ್ರ ಭಟ್, ಪತ್ನಿ ಲಲಿತ್ ಮೋಹಿನಿ ಮತ್ತು ಮಕ್ಕಳು ವಿವಿಧ ಸ್ಮಾರಕಗಳನ್ನು ಕಣ್ತುಂಬಿಕೊಂಡರು.

ವಿರೂಪಾಕ್ಷೇಶ್ವರ, ಪಂಪಾದೇವಿ, ಯಂತ್ರೋದ್ಧಾರಕ ಆಂಜನೇಯ ದೇವಾಲಯ, ಕೋದಂಡರಾಮ ದೇವಾಲಯ, ಕಡ್ಲೆಕಾಳು ಗಣಪತಿ, ಸಾಸುವೆಕಾಳು ಗಣಪತಿ, ಉಗ್ರ ನರಸಿಂಹ, ಅಚ್ಯುತರಾಯ ದೇವಾಲಯಗಳನ್ನು ವೀಕ್ಷಣೆ ಮಾಡಿದರು.

ಕುಟುಂಬ ಸಮೇತ ತುಂಗಭದ್ರಾ ನದಿಯಲ್ಲಿ ದೋಣಿ ವಿಹಾರವನ್ನೂ ನಡೆಸಿದರು. ಅಲ್ಲದೇ ಇಲ್ಲಿನ ಕಲೆ, ವಾಸ್ತುಶಿಲ್ಪದ ವೈಭವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net