

ಹೊಸಪೇಟೆ: ರೋಟರಿ ಕ್ಲಬ್ ನಿಂದ ತಾಲೂಕಿನ ಕಮಲಾಪುರದ ಬಳಿಯ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ನಲ್ಲಿ ಬುಧವಾರ ಬೀಜದ ಉಂಡೆಗಳನ್ನು ಪ್ರಸರಣ ಮಾಡಲಾಯಿತು.
ಈ ವೇಳೆ ಜೂಲಾಜಿಕಲ್ ಪಾರ್ಕ್ ಡಿಎಫ್ ಒ ರಾಜೇಶ್ ನಾಯ್ಕ ಮಾತನಾಡಿ, ಈಗ ಮಳೆಗಲವಿದೆ. ಬೀಜದ ಉಂಡೆಗಳನ್ನು ಪ್ರಸರಣ ಮಾಡಿದರೆ ಮೊಳಕೆಯೊಡೆದು ಬೆಳೆಯುತ್ತವೆ. ಬೀಜ ಪ್ರಸರಣಕ್ಕೆ ಇದು ಸಕಾಲ. ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮತೋಲನ ಕಾಪಾಡಿಕೊಳ್ಳಬೇಕು. ಪರಿಸರವನ್ನು ಉಳಿಸಿ ಬೆಳೆಸಬೇಕು. ವಾತಾವರಣವನ್ನು ಕಾಪಾಡಿದರೆ ನಮ್ಮ ಭವಿಷ್ಯವನ್ನು ಪರಿಸರ ಕಾಪಾಡುತ್ತದೆ ಎಂದು ಹೇಳಿದರು.
ಶ್ರೀಗಂಧ, ಕಕ್ಕೆ, ಬಸರಿ, ಕಾಡ್ ಬಾದಮಿ, ಕಾಡ್ ದಾಸವಾಳ ಸೇರಿದಂತೆ 14 ತಳಿಯ ಸುಮಾರು 1.30 ಲಕ್ಷ ಬೀಜದ ಉಂಡೆಗಳನ್ನು ತಯಾರಿಸಿ ಜೂಲಾಜಿಕಲ್ ಪಾರ್ಕ್ ನಲ್ಲಿ ನಗರದ ವೇಳೆ ವಿವಿಧ ಶಾಲಾ ಮಕ್ಕಳಿಂದ ಎಸೆಯಲಾಯಿತು.
ಆರ್ ಎಫ್ ಒ ಎಸ್.ನೀಲಿಮಾ, ರೋಟರಿ ಅಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಸೋನಿ, ಕಟ್ಡ ಪ್ರಶಾಂತ್, ಎಂ.ರವಿಕುಮಾರ್, ದಾದಾಪೀರ್, ಲೋಕೇಶ್, ಪ್ರಭಾಕರ್ ಇತರರಿದ್ದರು.