ಪ್ಲಾಸ್ಟಿಕ್ ಬಳಕೆದಾರರಿಗೆ ನೋಟಿಸ್

010222 Hampi Plastic User Notice
ಹಂಪಿಯ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಭಕ್ತರಿಗೆ ತೊಂದರೆ ನೀಡಿದ ವ್ಯಾಪಾರಿಗಳಿಗೆ ಪೊಲೀಸರು ಮಂಗಳವಾರ ನೋಟಿಸ್ ನೀಡಿದರು.
Published on

ಹೊಸಪೇಟೆ: ಹಂಪಿಯ ವಿವಿಧ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿರುವ ಕಾರಣ ಪೊಲೀಸರು ಮಂಗಳವಾರ ನೋಟಿಸ್ ನೀಡುವ ಮೂಲಕ ಕ್ರಮ ಕೈಗೊಂಡರು. ತೇರು ಬೀದಿ, ಪಾಕಿರ್ಂಗ್ ಸ್ಥಳಗಳಲ್ಲಿನ ಹೂವು, ಹಣ್ಣು ವ್ಯಾಪಾರಿಗಳಿಗೆ ನೋಟಿಸ್ ನೀಡಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ತಾಕೀತು ಮಾಡಿದರು. ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಹೂವು, ಹಣ್ಣು ಖರೀದಿಸುವಂತೆ ಒತ್ತಾಯಿಸುವ ಮೂಲಕ ತೊಂದರೆ ನೀಡುತ್ತಿದ್ದ ವ್ಯಾಪಾರಿಗಳಿಗೂ ನೋಟಿಸ್ ನೀಡಿ, ಇನ್ನು ಮುಂದೆ ಆ ರೀತಿ ಪೀಡಿಸದಂತೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net