

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಗುರುವಾರ 20 ಕ್ರಸ್ಟ್ ಗೇಟ್‌ಗಳ ಮೂಲಕ 58 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಟ್ಟಿರೋದರಿಂದ ಐತಿಹಾಸಿಕ ಪ್ರಸಿದ್ಧ ಹಂಪಿಯ ಕೆಲ ಸ್ಮಾರಕಗಳು ಜಲಾವೃತಗೊಂಡಿವೆ.
ತುAಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಹರಿಬಿಟ್ಟ ಪರಿಣಾಮ ಪುರಂದರದಾಸರ ಮಂಟಪ ಭಾಗಃ ಮುಳಗಡೆಯಾಗಿದೆ. ಶ್ರೀ ವಿರುಪಾಕ್ಷೇಶ್ವರ ದೇಗುಲದ ಇಂಭಾಗದಲ್ಲಿನ ಕರ್ಮಮಂಟಪ ಹಾಗೂ ಸ್ನಾನಗಟ್ಟ ಮುಳುಗಡೆ ಆಗಿವೆ. ನದಿದಂಡೆಗೆ ಹೊಂದಿಕೊAಡಿರುವ ಹಂಪಿ, ಬುಕ್ಕಸಾಗರ, ವೆಂಕಟಾಪುರ ಗ್ರಾಮಗಳಿಗೆ ಡಂಗುರ ಸಾರಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತಿಳಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಓಡಾಡದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.