

ಹೊಸಪೇಟೆ: ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ಮಾಲಾಧಾರಣೆ ವ್ರತ ಸಂಪನ್ನಗೊAಡಿದ್ದು, ಒಂದು ತಿಂಗಳ ನಂತರ ಮಂಗಳವಾರ ಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಶ್ರಾವಣ ಮಾಸದ ಅಮಾವಾಸ್ಯೆ ಮರುದಿನ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯಭಾರತಿ ಸ್ವಾಮಿಗಳಿಂದ ಮಾಲಾ ಧಾರಣೆ ಮಾಡಿಸಿಕೊಂಡು ವ್ರತಾಚರಣೆ ಆರಂಭವಾಗುತ್ತದೆ. ಮಂಗಳವಾರ ಕೊನೆ ದಿನವಾಗಿದ್ದು, ದೇಗುಲ ಹಾಗೂ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಾಲಾಧಾರಿಗಳಾದ ಗೋಪಾಲ್, ಶಿವು, ಗೋಪಿ, ರಾಜೇಶ್, ಶಾಂತಕುಮಾರ್, ವೀರೇಶ್, ಶಿವಾನಂದ ಇತರರಿದ್ದರು.