ಪ್ರಾಮಾಣಿಕತೆ ಮೆರೆದ ಪ್ರವಾಸಿ ಮಿತ್ರರು

24102022 hospet mobile save
Published on

ಹೊಸಪೇಟೆ: ಐತಿಹಾಸಿಕ ಹಂಪಿಯಲ್ಲಿ ಪ್ರವಾಸಿಗರು ಕಳೆದುಕೊಂಡಿದ್ದ ಎರಡು ಐಫೋನ್ ಮೊಬೈಲ್‌ಗಳನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರರು ಪ್ರಾಮಾಣಿಕತೆ ಮೆರೆದಿದ್ದಾರೆ.

ಆಂಧ್ರ ಪ್ರದೇಶದ ಇಬ್ಬರು ಯುವತಿಯರು ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಆಗಮಿಸಿದ್ದರು. ಸೋಮವಾರ ನೆಲಮಹಡಿ ಶಿವದೇವಾಲಯದಲ್ಲಿ ಎರಡೂ ಮೊಬೈಲ್‌ಗಳನ್ನು ಮರೆತು ಹೋಗಿದ್ದರು. ಬಳಿಕ ಮೊಬೈಲ್ ರಿಂಗಣಿಸುತ್ತಿರುವುದನ್ನು ಗಮನಿಸಿದ್ದ ರಾಮಾನಾಯಕ್ ತಕ್ಷಣ ಅದನ್ನು ಕೈಗೆತ್ತಿಕೊಂಡು ಪ್ರತಿಕ್ರಿಯಿಸಿದ್ದಾರೆ. ಮೊಬೈಲ್ ಅಂಡರ್‌ಗ್ರೌಂಡ್ ಶಿವದೇವಾಲಯದಲ್ಲಿ ಸಿಕ್ಕಿದೆ ಎಂದು ಉತ್ತರಿಸಿದ್ದಾರೆ. ಅಷ್ಟರಲ್ಲಾಗಲೇ ಪ್ರವಾಸಿಗರ ತಂಡ ಕಮಲ ಮಂಟಪದತ್ತ ಸಾಗುತ್ತಿರುವುದನ್ನು ಅರಿತು, ಅಲ್ಲಿಗೇ ಬಂದು ತಲುಪಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಪ್ರವಾಸಿಗರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದರು. ಪ್ರವಾಸಿ ಮಿತ್ರರಾದ ಜಯಪ್ರಕಾಶ, ಓಬಳೇಶ ಜೊತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net