

ಹೊಸಪೇಟೆ: ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ಪುರಾತತ್ವ ಅಧೀಕ್ಷಕ ನಿಖಿಲ್ ದಾಸ್ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ, ಹಂಪಿ ನಿರ್ವಾಹಣ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಯಿಂದ ಹಂಪಿ ವಿಜಯವಿಠಲದ ಬಳಿ ವಿಶ್ವ ಪರಂಪರಾ ಸಪ್ತಾಹದ ನಿಮಿತ್ತ ಸೋಮವಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಾಂಸ್ಕೃತಿಕ ಸಂಪತ್ತುನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ನಮ್ಮ ಪರಂಪರೆ ರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮಲ್ಲರ ಹೊಣೆ. ಅದರಲ್ಲೂ ವಿಶೇಷವಾಗಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾದುದು. ಹೀಗಾಗಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಹAಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತ ರಂಗನಾಥ್, ಪ್ರವಾಸೋದ್ಯಮ ಇಲಾಖೆಯ ಡಿಡಿ ಪ್ರಭುಲಿಂಗ ಎಸ್.ತಳಿಕೆರಿ, ಕೇಂದ್ರ ಪುರಾತತ್ವ ಉಪ ಅಧೀಕ್ಷಕಿ ಪ್ರೇಮ, ಪ್ರಮುಖರಾದ ಅನಿರುದ್ದೀನ್ ದೇಸಾಯಿ, ಸುನಿಲ್, ಲೋಕಬಿರಾಮ, ಎಂ.ನಾಗರಾಜ್, ವಿರೂಪಾಕ್ಷಿ ಇತರರಿದ್ದರು.