

ಹೊಸಪೇಟೆ: ಪರಂಪರೆಯೆAದರೆ ಕೇವಲ ಸ್ಮಾರಕಗಳು ಮತ್ತು ನೆನಪುಗಳು ಮಾತ್ರವಲ್ಲ. ಅದು ನಮ್ಮ ಸಂಸ್ಕೃತಿಯ ಜೀವಾಳ. ಅದನ್ನು ಸಂರಕ್ಷಿಸುವುದು ಎಂದರೆ ನಮ್ಮ ಪೂರ್ವಜರನ್ನ ಗೌರವಿಸುವುದು ಜತೆ, ಮುಂದಿನ ಪೀಳಿಗೆಗೆ ಪ್ರೇರಣೆಯ ಬೆಳಕು ಹರಡುವುದಾಗಿದೆ ಎಂದು ಹಂಪಿಯ ರಾಜ್ಯ ಪುರಾತತ್ತ್ವ ಇಲಾಖೆಯ ನಿರ್ದೇಶಕ ಡಾ.ಆರ್.ಶೇಜೇಶ್ವರ ಹೇಳಿದರು.
ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಇನ್ಸಿಟ್ಯೂಷನ್ ಆಫ್ ಇಂಜಿನೀಯರ್ಸ್ (ಇಂಡಿಯಾ) ಸಹಯೋಗದಲ್ಲಿ ಹಂಪಿಯ ರಾಜಮಾನ್ಯರ ವಸತಿಗೃಹದ ಬಳಿಯ ವೀರಭದ್ರ ದೇಗುಲದಲ್ಲಿ ಶುಕ್ರವಾರ ಹಮ್ಮಿಕೋಂಡ ವಿಶ್ವ ಪರಂಪರೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಕ್ಷಣೆ ಎಂದರೆ ಕೇವಲ ಇತಿಹಾಸವನ್ನು ಉಳಿಸಿಕೊಳ್ಳುವುದು ಮಾತ್ರವಲ್ಲ, ಅದು ನಮ್ಮ ಒಳಗಿನ ಸಂಸ್ಕೃತಿಯ ಅರಿವನ್ನು ಜೀವಂತವಾಗಿಬೇಕು. ಸಮಾಜದ ಸಾಂಸ್ಕೃತಿಕ ಬುನಾದಿಯನ್ನು ಬಲಪಡಿಸುವ ಒಂದು ಜವಾಬ್ದಾರಿಯಾಗಿದೆ. ನಮ್ಮ ಪರಂಪರೆಯ ಆಚರಣೆಗಳಲ್ಲಿ ವೈಜ್ಞಾನಿಕತೆಯ ಅಂಶಗಳು ಅಡಗಿವೆ ಎಂದರು.
ರಾಜ್ಯ ಪುರಾತತ್ತ್ವ ಇಲಾಖೆಯ ಪುರಾತತ್ತ್ವ ಸಹಾಯಕ ಡಾ.ಆರ್.ಮಂಜನಾಯ್ಕ ಮಾತನಾಡಿ, ಹಂಪಿಯ ಜಾತ್ರೆ, ಫಲಪೂಜೆ, ಮತ್ತಿತರ ಆಚರಣೆಗಳು ವಿಜಯನಗರ ಸಾಮ್ರಾಜ್ಯದಿಂದ ಇಲ್ಲಿಯವರೆಗೆ ಆಚರಣೆ ಆಗುತ್ತಿರುವುದು ನಮ್ಮ ಪರಂಪರೆಯ ಹೆಮ್ಮೆ. ಇಂತಹ ಪರಂಪರೆಯನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುಬೇಕು ಎಂದರು.