

ಹೊಸಪೇಟೆ: ಮೂಲಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಲ್ಯಾಣ ಕರ್ನಾಟಕ ಘಟಕದಿಂದ ಹಂಪಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಿಕೆರಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ವಿಶ್ವ ಪ್ರಸಿದ್ಧ ಐತಿಹಾಸಿಕ ಹಂಪಿಯು ವಿಶ್ವಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿದೆ. ಹಂಪಿಗೆ ದೇಶ ಮತ್ತು ವಿದೇಶಗಳಿಂದ ಹಾಗೂ ಗಣ್ಯ ಮಾನ್ಯರು ಭೇಟಿ ನೀಡುತ್ತಾರೆ. ಪ್ರವಾಸಿ ಮಾರ್ಗದರ್ಶಿಗಳು ಹಂಪಿಯ ಘನ ಚರಿತ್ರೆಯನ್ನು ತಿಳಿಸುತ್ತೇವೆ, ಮಾರ್ಗದರ್ಶಿಗಳಿಗಾಗಿ ಸಮವಸ್ತ್ರ, ಗೈಡ್ ಕಿಟ್, ಕಾಲರ್ ಮೈಕ್, ವಿದೇಶಿ ಭಾಷ ತರಬೇತಿ ಸೇರಿದಂಥೆ ಇತರೆ ಬೇಡಿಕೆಗಳನ್ನು ಪ್ರವಾಸಿ ಮಾರ್ಗದರ್ಶಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯಧ್ಯಾಕ್ಷ ಎಂ.ನಾಗರಾಜ್, ಉಪಾ ಅಧ್ಯಕ್ಷ ಎಸ್.ದೇವರಾಜ್, ಪ್ರಮುಖರಾದ ವಿರುಪಾಕ್ಷಿ ವಿ.ಹಂಪಿ, ಲೋಕಾಭಿರಾಮ, ವಿಭೂತಿ ಪಂಪಾಪತಿ, ಎಚ್.ಹುಲುಗಪ್ಪ, ಜೆ.ನಾಗರಾಜ, ಹನುಮಂತ, ವಿರುಪಾಕ್ಷಿ, ಭಾನುಪ್ರಕಾಶ, ಎಂ.ಗೋವಿAದ ಇತರರಿದ್ದರು.
ಸಂಘದ ಕಾರ್ಯಧ್ಯಾಕ್ಷ ಎಂ.ನಾಗರಾಜ್, ಉಪಾ ಅಧ್ಯಕ್ಷ ಎಸ್.ದೇವರಾಜ್, ಪ್ರಮುಖರಾದ ವಿರುಪಾಕ್ಷಿ ವಿ.ಹಂಪಿ, ಲೋಕಾಭಿರಾಮ ಇತರರಿದ್ದರು.