

ಹೊಸಪೇಟೆ: ಕೊಪ್ಪಳದ ಸಣಾಪುರದಲ್ಲಿ ಅತ್ಯಾಚಾರ ಪ್ರಕರಣ ಕುರಿತು ಹಾಗೂ ಕ್ರಮಕ್ಕಾಗಿ ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮಾತಮಾಡುವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣಾಪುರ ಭಾಗದಲ್ಲಿ ಡ್ರಗ್ ಮಾಫಿಯ ನಡೆಯುತ್ತಿದೆ. ಈ ಹಿಂದೆ ಕೆಲ ರಾಜಕಾರಣಿ, ಅಧಿಕಾರಿಗಳ ಕೈವಾಡವಿದೆ. ಕೆಲವರು ಶಾಮಿಲಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಹೊಂಸ್ಟೇಗಳು ಬಂದ್ ಮಾಡಬೇಕು. ಹಂಪಿ ನೋಡಲು ಬರೋ ಹೆಸರಲ್ಲಿ ಈ ಥರ ಕೆಲಸ ಮಾಡಲಾಗುತ್ತಿದೆ. ಅಲ್ಲಿಗೆ ಬರುವವರು ಹೈಫೈ ವಿದೇಶಿಗರಲ್ಲಾ. ಡ್ರಗ್ ತಗೆದುಕೊಳ್ಳಲು ಮಾತ್ರ. ಇದು ಈ ಹಿಂದೆಯಿಂದಲೂ ನಡೆದುಕೊಂಡು ಬಂದ ವ್ಯವಸ್ಥಿತ ಜಾಲವಾಗಿದೆ. ಗಂಗಾವತಿ ಭಾಗದಲ್ಲಿ ಅಷ್ಟೆ ಅಲ್ಲಾ, ಎಲ್ಲಾ ಪ್ರವಾಸಿ ತಾಣಗಳಲ್ಲೂ ಕೂಡ ಈ ಥರ ಸಮಸ್ಯೆಯಿದೆ ಎಂದರು.
ನಾನು ಈ ಹಿಂದೆ ವಿಧಾನ ಸೌಧದಲ್ಲಿ ಪ್ರಸ್ತಾಪ ಮಾಡಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೇರಿ ಕೆಲವರು ನನ್ನ ವಿರುದ್ಧ ಬಹಳ ಮಾತನಾಡಿದರು. ಇಂತಹ ಘಟನೆಗಳು ನಡೆಯ ಬಾರದು ಇದಕ್ಕೆ ರಾಜ್ಯ ಸರ್ಕಾರ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದರು.
ಮಂಡನೆ ಆಗಿರೋ ಬಜೆಟ್ ಅಲ್ಪಸಂಖ್ಯಾತರ ಪರವಾದದ್ದಲ್ಲ. ಅಲ್ಪಸಂಖ್ಯಾತರು ಅಂದರೆ ಕೇವಲ ಮುಸ್ಲಿರೊಬ್ಬರೇ ಬರಲ್ಲ. ಸಿಖ್, ಜೈನ್ ಕ್ರಿಶ್ಚಿಯನ್ ಧರ್ಮದವರು ಬರುತ್ತಾರೆ. ಇಮಾಮ್ ಗಳಿಗೆ ಅಷ್ಟೇ ಮಾಶಾಸನ ಹೆಚ್ಚಳ ಮಾಡಿಲ್ಲ. ಅರ್ಚಕರ ಮಾಶಾಸನವನ್ನೂ ಹೆಚ್ಚಳ ಮಾಡಿದ್ದೇವೆ. ಮುಸ್ಲಿಂ ಸಮಾಜದಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತ ಆಗ್ತಿದಾರೆ. ಸರ್ಕಾರಕ್ಕೆ ವರದಿ ಬಂದ ಬಳಿಕ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿದ್ದೇವೆ. ಹೀಗಾಗಿ ಪ್ರತ್ಯೇಕ ಕಾಲೇಜುಗಳನ್ನ ಘೋಷಣೆ ಮಾಡಿದ್ದೇವೆ. ಬಿಜೆಪಿಯವರಿಗೆ ಮಾಹಿತಿ ಕೊರತೆ ಇದೆ. ಹೀಗಾಗಿ ಬಾಯಿಗೆ ಬಂದಿದ್ದನ್ನ ಮಾತಾಡ್ತಿದ್ದಾರೆ. ಮಂಡನೆ ಆದ ಬಜೆಟ್ ಸಮತೋಲನ ಆಗಿದೆ ಎಂದರು.