ಪ್ರವಾಸಿ ತಾಣದಲ್ಲಿ ಸ್ವಚ್ಛತೆ ಕಾಪಾಡಿ

25 MANJU 01
Published on

ಹೊಸಪೇಟೆ: ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ, ಮುಜರಾಯಿ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ ಹಾಗೂ ಪ್ರವಾಸಿ ಮಾರ್ಗದರ್ಶಿಗಳಿಂದ, ಹಂಪಿ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸಂಘಟನೆ ಸಹಯೋಗದೊಂದಿಗೆ ಹಂಪಿ ಪರಿಸರದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ ಬುಧವಾರ ನಡೆಸಲಾಯಿತು.

ಹಂಪಿಯ ಎದರು ಬಸವಣ್ಣ ಸ್ಮಾರಕದಲ್ಲಿ ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ ಚಾಲನೆ ನೀಡಿ ಮಾತನಾಡಿ, ಪ್ರವಾಸೋದ್ಯಮ ತಾಣಗಳು ಸೇರಿದಂತೆ ಗ್ರಾಮೀಣ ಮತ್ತು ನಗರ ಪ್ರದೇಶದಳಲ್ಲಿ ಕಚೇರಿಗಳು, ಉಧ್ಯಾನವನಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ನಮ್ಮ ಮನಸ್ಸು ಸ್ವಚ್ಛ ಹಾಗೂ ಸುಂದರವಾಗಿರುತ್ತದೆ ಎಂದರು.

ಹAಪಿ ಬಜಾರು, ಪ್ರವಾಸೋಧ್ಯಮ ಇಲಾಖೆ ಆವರಣ, ಮಾತಂಗ ಪರ್ವತದ ರಸ್ತೆ ಸೇರಿದಂತೆ ವಿವಿಧೆಡೆ ಸ್ವಚ್ಚತೆ ಮಾಡಲಾಯಿತು.

ಭಾರತೀಯ ಪುರಾತತ್ವ ಇಲಾಖೆ ಸ್ಥಾನಿಕಾಧಿಕಾರಿಗಳಾದ ಅನಿರುದ್ಧ್ ದೇಸಾಯಿ, ಸುನಿಲ್‌ಕುಮಾರ್, ಪಿಡಿಓ ಗಂಗಾಧರ, ಅಧ್ಯಕ್ಷೆ ರಜನಿ, ಪ್ರವಾಸೋಧ್ಯಮ ನಿಗಮದ ಹೋಟೆಲ್ ಮಯೂರ ಭುವನೇಶ್ವರಿ ವ್ಯವಸ್ಥಾಪಕ ಸುನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net