ಗುರು ಭವನಕ್ಕೆ 5 ಕೋಟಿ ರೂ.: ಸಚಿವ ಆನಂದ ಸಿಂಗ್ ಭರವಸೆ

261122 Hospete Primary School Teachers Association
ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹೊಸಪೇಟೆಯಲ್ಲಿ ಶನಿವಾರ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ಗೆ ಮನವಿ ಸಲ್ಲಿಸಲಾಯಿತು.
Published on

ಹೊಸಪೇಟೆ: ಪಟ್ಟಣದಲ್ಲಿ ಗುರು ಭವನ ನಿರ್ಮಾಣ, ಅಭಿಮತ ವರ್ಗಾವಣೆ, ಶೈಕ್ಷಣಿಕ ಕಾರ್ಯಾಗಾರ ನಡೆಸುವಂತೆ ಕೋರಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಗರದಲ್ಲಿ ಪ್ರವಾಸೋದ್ಯಮ ಹಾಗೂ ಪರಿಸರ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್‌ಗೆ ಶನಿವಾರ ಮನವಿ ಸಲ್ಲಿಸಿತು.

ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ಗುರು ಭವನಕ್ಕೆ 5 ಕೋಟಿ ರೂ. ಮೀಸಲಿಡುವಂತೆ ಆಪ್ತ ಕಾರ್ಯದರ್ಶಿಗೆ ಸೂಚಿಸಿದರು. ಅಭಿಮತ ವರ್ಗಾವಣೆ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ ಆನಂದ ಸಿಂಗ್, ಶೈಕ್ಷಣಿಕ ಕಾರ್ಯಾಗಾರ ನಡೆಸಲು ಧನಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಸಂಘದಿಂದ ಸಚಿವ ಆನಂದ ಸಿಂಗ್‌ರನ್ನು ಸನ್ಮಾನಿಸಲಾಯಿತು.

ಸಂಘದ ಕಂಪ್ಲಿ ಅಧ್ಯಕ್ಷ ಹನುಮಂತಪ್ಪ, ಖಜಾಂಚಿ ದ್ಯಾಮನಾಯ್ಕಾ, ಸಂಘಟನಾ ಕಾರ್ಯದರ್ಶಿ ನೀಲಮ್ಮ ಗಚ್ಚಿನಮಠ, ಸಂಚಾಲಕ ಗುರುಬಸವರಾಜ. ಶಿಕ್ಷಕರಾದ ಗೌರಮ್ಮ, ಮಂಜಪ್ಪ. ಟಿ.ಅನ್ನಪೂರ್ಣ, ಅಶೋಕ, ಹನುಮಂತಪ್ಪ, ನರೇಂದ್ರಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net