ಹೊಸಪೇಟೆ: ಧಾರವಾಡದ ಆಟಮಾಟ ರಂಗ ತಂಡದಿAದ ಡಿ.ಹಿರೇಹಾಳ್ ಇಬ್ರಾಹಿಂ ಸಾಹೇಬರ ಪುಣ್ಯ ಸ್ಮರಣೆ ನಿಮಿತ್ತ ನಗರದ ಸಿದ್ದಲಿಂಗಚೌಕಿಯ ಸಂತ ಶಿಶುನಾಳ ಶರೀಫ ರಂಗ ಮಂದಿರದಲ್ಲಿ ಆ.02 ರಂದು ಗುಡಿಯ ನೋಡಿರಣ್ಣ ವಿಶಿಷ್ಟ ರಂಗ ಪ್ರಯೋಗದ ಪ್ರದರ್ಶನ ನಡೆಯಲಿದೆ ಎಂದು ಭಾವೈಕ್ಯತಾ ವೇದಿಕೆ ಟ್ರಸ್ಟ್ನ ಅಧ್ಯಕ್ಷ ಪಿ.ಅಬ್ದುಲ್ ತಿಳಿಸಿದರು.