

ಹೊಸಪೇಟೆ: ನಿಯಮ ಮೀರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಜಿಲ್ಲಾ ವಿಭಾಗದಿಂದ ಜಿಲ್ಲಾದಿಕಾರಿ ಎಂ.ಎಸ್.ದಿವಾಕÀÀರಗೆ ಗುರುವಾರ ಮನವಿ ಸಲ್ಲಿಸಿಲಾಯಿತು.
ಕಂದಾಯ ನಿರೀಕ್ಷಕ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಎಂ.ಪಿ.ಎA.ಮAಜುನಾಥ ಇವರು ಸರ್ಕಾರಿ ನೌಕರರಾಗಿದ್ದರು ಸರ್ಕಾರದ ನೀತಿ, ನಿಷ್ಠೆ ,ಕರ್ತವ್ಯ ಶ್ರದ್ಧೆ ಹೊಂದಿಲ್ಲ, ಸರ್ಕಾರಿ ನೌಕರರಿಗೆ ತಕ್ಕದ್ದಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆಗ್ರಹಿಸಿದರು.
ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನಗೌಡ ಕಳೆದ ಹತ್ತು ವರ್ಷಗಳಿಂದ ವ್ಯಾಪಕ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಹಾಗೂ ಕರ್ತವ್ಯ ನಿರ್ಲಕ್ಷತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಸರ್ಕಾರಿ ನೌಕರರ ಸಂಘವನ್ನು ಕಳೆದ ಹತ್ತು ವರ್ಷಗಳಿಂದ ತನ್ನ ಸ್ವಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳುವ ಕಾರಣಕ್ಕಾಗಿ ಸರ್ಕಾರಿ ನೌಕರಿಗೆ ದ್ರೋಹ ಮಾಡಿ ಕರ್ತವ್ಯ ಲೋಪ ಎಸೆಗುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನ ಅವರು ಸಂಪಾದಿಸಿದ್ದಾರೆ ಎಂದು ಆರೋಪಿಸಿದರು.
ಹಗರಿಬೊಮ್ಮನಹಳ್ಳಿಯ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಗಂಗಾವತಿ ಭೀಮಪ್ಪನವರ ಹಾಗೂ ನೌಕರರ ಸಂಘದ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಎಂ.ಪಿ.ಎA.ಮAಜುನಾಥ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ಚುನಾವಣೆ ನಂತರ ರಾಜ್ಯ ಅಧ್ಯಕ್ಷ ಷಡಾಕ್ಷರಿ ಸರ್ಕಾರದ ವಿರುದ್ಧ ಗೆದ್ದಿದ್ದಾರೆ. ಸರ್ಕಾರದ ಆಮಿಷ, ಹಣ ಹಾಗೂ ಇತರೆ ಪ್ರಲೋಭನೆಗಳನ್ನು ಮೀರಿ ಗೆದ್ದಿದ್ದಾರೆ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಇವರು ಸರ್ಕಾರಿ ನೌಕರರಾಗಿದ್ದು, ನೀತಿ, ನಿಷ್ಠೆ ,ಕರ್ತವ್ಯ ಶ್ರದ್ಧೆ ಹೊಂದಿಲ್ಲ. ಸರ್ಕಾರಿ ನೌಕರರಿಗೆ ತಕ್ಕದ್ದಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.