

ಹೊಸಪೇಟೆ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಒಟ್ಟು 61 ಸ್ಥಾನಕ್ಕೆ ನಗರದ ಸರ್ದಾರ್ ಪಟೇಲ್ ಪ್ರೌಢಾ ಶಾಲೆಯಲ್ಲಿ ಶನಿವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯ ವೆರಗೆ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಜಿಲ್ಲೆಯಲ್ಲಿ 61 ನಿರ್ದೇಶಕರು ಆಯ್ಕೆಯಾಯಲ್ಲಿ ಈಗಾಗಲೇ 42 ಸ್ಥಾನಗಳಿಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಆಸ್ಪತ್ರೆ, ರಾಜ್ಯ ಲೆಕ್ಕ ಪತ್ರ ಇಲಾಖೆ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ತಲ ಒಂದು ಸ್ಥಾನ, ಕಂದಾಯ ಇಲಾಖೆ 3 ಸ್ಥಾನ, ಆರೋಗ್ಯ ಇಲಾಖೆ 4 ಸ್ಥಾನ, ಪ್ರಾಥಮಿಕ ಶಾಲೆ 5, ಪ್ರೌಢಾ ಶಾಲೆ 2 ಸೇರಿದಂತೆ 17 ಸ್ಥಾನಗಳಿಗೆ 37 ಅಭ್ಯಾರ್ಥಿಗಳ ತೀವ್ರ ಪೈಪೋಟಿ ನಡೆದಿತ್ತು.
ಕAದಾಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳ ಎರಡು ಸ್ಥಾನಗಳಿಗೆ ಅನಿಲ್ ಕುಮಾರ್, ಅಂದಾನ ಗೌಡ ಗೆಲವು ಸಾಧಿಸಿದ್ದಾರೆ. ತಾಲೂಕು ಹಾಗೂ ಉಪವಿಭಾಗದಲ್ಲಿ ಎಚ್.ನಾಗರಾಜ್ ಗೆಲವು ಕಂಡಿದ್ದಾರೆ. ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ಎಸ್.ಬಿ.ಶಿವಶಂಕರ್ ಅವರಿಗೆ ಗೆಲವು ಕಂಡರೆ, ಆರೋಗ್ಯ ಇಲಾಖೆಯ ಆಡಳಿತ ಕಚೇರಿ ವಿಭಾಗದಲ್ಲಿ ಎಚ್.ರಾಜೀವ್ ಹಾಗೂ ಇತರೆ ಸಿಬ್ಬಂದಿ ವಿಭಾಗದಲ್ಲಿ ಅನುಲ್ ಕುಮಾರ್, ಆರ್.ಚನ್ನಬಸವ, ಕೆ.ಕೃಷ್ಣ ಅವರು ಗೆಲವು ಸಾಧಿಸಿದ್ದಾರೆ. ಲೆಕ್ಕ ಪರಿಶೋಧನ ಮತ್ತು ಲೆಕ್ಕ ಪತ್ರ ಇಲಾಖೆ ಅಳ್ಳಳ್ಳಿ ಮಂಜುನಾಥ, ಬಿಸಿಎಂ ವಿಭಾಗದಲ್ಲಿ ಪವನ್ ಕುಮಾರ್, ಪ್ರೌಢಾ ಶಾಲಾ ವಿಭಾಗದ ಎರಡು ಸ್ಥಾನಗಳಿಗೆ ಕೆ.ಮಲ್ಲೇಶಪ್ಪ ಹಾಗೂ ಎಚ್.ಶಿವರಾಮಪ್ಪ ಗೆಲವು ಕಂಡಿದ್ದಾರೆ.