

ಹೊಸಪೇಟೆ: ರಾಮನಗರ ಜಿಲ್ಲೆಯಲ್ಲಿ ವಿಶೇಷ ಚೇತನ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನ್ನ ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಶನಿವಾರ ವಿಶೇಷಚೇತನರ ಸಂಘದಿAದ ಗ್ರೇಡ್2 ತಹಸೀಲ್ದಾರ್ ವೆಂಕಟೇಶ್ ಆಶ್ರೀತ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಸಲ್ಲಿಸಲಾಯಿತು.
ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಖುಷಿ ಎಂಬ ಅಪ್ರಾಪ್ತೆ ವಿಶೇಷಚೇತನ ಬಾಲಕಿ ಮೇ 11ರಂದು ನಾಪತೆಯಾಗಿ, ಮೇ 12ರಂದು ಶವವಾಗಿ ಪತ್ತೆಯಾಗಿದ್ದಳು. ಇದು ಮೇಲ್ನೋಟಕ್ಕೆ ಆ ಬಾಲಕಿಯ ಮೈ ಮೇಲೆ ಗಾಯಗಳಿದ್ದವು. ಇದನ್ನು ನೋಡಿದರೆ ಯಾರೋ ದುಷ್ಕರ್ಮಿಗಳು ಆ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆಯನ್ನು ಸ್ಥಳೀಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತನಿಖೆ ತೀವ್ರಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದು. ದೇಶದಲ್ಲಿ ಹೆಣ್ಣುಮಕ್ಕಳಿಗೆ ತಾಯಿಯ ಸ್ಥಾನವನ್ನು ನೀಡಿ ಗೌರವಿಸಿ ಪೂಜಿಸಲಾಗುತ್ತಿದೆ. ಅಂತಹ ಈ ದೇಶದಲ್ಲಿ ವಿಶೇಷ ಚೇತನಳಾದ ಅಸಹಾಯಕ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ತಪ್ಪಿತಸ್ಥರನ್ನು ಆದಷ್ಟು ಬೇಗ ಬಂಧಿಸಿ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಎನ್.ವೆಂಕಟೇಶ, ಲೋಹಿತ್, ಸಣ್ಣಮಾರೆಪ್ಪ, ಶೇಷು ಇತರರಿದ್ದರು.