ಹೊಸಪೇಟೆ : ಬೇಡ ಜಂಗಮ ಮಹಿಳಾ ಸಮಾಜದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ (ಹೆಚ್ಪಿವಿ) ಉಚಿತ ಲಸಿಕೆಯನ್ನು ಹಾಕಿಸಲಾಯಿತು.
ವೈದ್ಯೆ ಡಾ.ಸುಮಂಗಲದೇವಿ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ನಿಂದ ಸಂರಕ್ಷಣೆ ಪಡೆಯಲು ಹೆಚ್ಪಿವಿ ವ್ಯಾಕ್ಸಿನ್ ಉತ್ತಮ ಪರಿಣಾಮಕಾರಿಯಾಗಿದೆ. ಪ್ರತಿಯೊಂದು ಹೆಣ್ಣು ಮಗುವಿಗೂ ಈ ಲಸಿಕೆ ವರದಾನವಾಗಿದೆ. ಪ್ರತಿಯೊಬ್ಬರು ಜಾಗೃತರಾಗಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಹೆಚ್ಪಿವಿ ವ್ಯಾಕ್ಸಿನ್ ಪಡೆದು ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಿರಿ ಎಂದರು.
ಅAದಾಜು 40ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಮೂರನೇ ಸುತ್ತಿನ ಲಸಿಕೆಯನ್ನು ಹಾಕಲಾಯಿತು. ಇದರೊಂದಿಗೆ 10 ಬಾಲಕಿಯರಿಗೆ ಮೊದಲನೇ ಸುತ್ತಿನ ಲಸಿಕೆಯನ್ನು ಹಾಕಲಾಗಿದೆ ಎಂದರು.
ಬೇಡ ಜಂಗಮ ಮಹಿಳಾ ಸಮಾಜದ ಅಧ್ಯಕ್ಷ ಶೀಲಾ ಕುಮಾರಸ್ವಾಮಿ, ಕಾರ್ಯದರ್ಶಿ ವೀಣಾ ಹಿರೇಮಠ, ಉಪಾಧ್ಯಕ್ಷೆ ಅನ್ನಪೂರ್ಣ, ನಿರ್ದೇಶಕರಾದ ಮೇಘನಾ ಹಿರೇಮಠ್, ಪ್ರತಿಭಾ ಹಿರೇಮಠ್, ಸುನಂದ, ಶೋಭಾ ಹಂಪಾಪಟ್ಟಣ, ಸುಜಾತ, ಸಂಗೀತ ಇತರರಿದ್ದರು.