ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ ತೀವ್ರಗಾಯ

IMG-20240916-WA0026
Published on

ಹೊಸಪೇಟೆ: ತಾಲೂಕಿನ ಧರ್ಮಸಾಗರದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಮಂಗಳವಾರ ಹುಚ್ಚು ನಾಯಿ ದಾಳಿ ಮಾಡಿ ತೀವ್ರಗಾಯಗೊಳಿಸಿದೆ. ಇನ್ನೂ ಮೂರ್ನಾಲ್ಕು ಜನರ ಮೇಲೂ ದಾಳಿ ನಡೆಸಿದೆ.

ಗ್ರಾಮದ ರಾಮ ಮತ್ತು ಲೋಕಮ್ಮ ದಂಪತಿ ಪುತ್ರಿ ಜನನಿ (3) ತೀವ್ರವಾಗಿ ಗಾಯಗೊಂಡಿದ್ದು, ಗಂಟಲು ಮತ್ತು ಗಲ್ಲ ಮತ್ತು ಕುತ್ತಿಗೆ ಮೇಲೆ ತೀವ್ರತರ ಗಾಯಗಳಾಗಿವೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ಗೆ ಕಳುಹಿಸಲಾಗಿದೆ. ಧರ್ಮ ಸಾಗರ ಗ್ರಾಮದಲ್ಲಿ ಈ ಹುಚ್ಚು ನಾಯಿಯಿಂದ ಜನರು ಕೂಡ ಬೇಸತ್ತಿದ್ದಾರೆ. ಈ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿಯೂ ಜಾಸ್ತಿಯಾಗಿದ್ದು, ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಗರದ ಎಂ.ಪಿ.ಪ್ರಕಾಶ್ ನಗರ, ಸಿದ್ದಲಿಂಗಪ್ಪ ಚೌಕಿ, ಹಾಗೂ ಚಿತ್ತವಾಡ್ಗಿಯಲ್ಲಿ ಸೋಮವಾರ ಬೀದಿ ನಾಯಿಗಳು ದಾಳಿ ಮಾಡಿದ್ದು, ಮಕ್ಕಳು ಸೇರಿದಂತೆ ಆರೇಳು ಜನರು ಗಾಯಗೊಂಡಿದ್ದಾರೆ. ನಗರದಲ್ಲಿ ಒಂದೇ ದಿನಕ್ಕೆ ಮಕ್ಕಳು ಸೇರಿದಂತೆ ಆರೇಳು ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಇನ್ನೂ ಸಾಕು ಪ್ರಾಣಿಗಳ ಮೇಲೂ ನಾಯಿಗಳು ದಾಳಿ ನಡೆಸಿವೆ. ಹಾಗಾಗಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net