

ಹೊಸಪೇಟೆ: ಆರ್ಯವೈಶ್ಯ ಸಂಘದಿAದ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಗಿರಿಜಾ ಕಲ್ಯಾಣ್ಯೋತ್ಸವ ಅದ್ದೂರಿಯಾಗಿ ಸಂಭ್ರಮದಿAದ ಜರುಗಿತು.
ಬೆಳಿಗ್ಗೆ ಗಣಪತಿ ಹಾಗೂ ಗಂಗಾಪೂಜೆಯೊAದಿಗೆ ಆರಂಭವಾದ ಕಾರ್ಯಕ್ರಮ, ಮಹಾಸಂಕಲ್ಪ, ಅಭಿಷೇಕ್, ಪಂಚಾಮೃತ ಅಭಿಷೇಕ ಹಾಗೂ ಗಂಧ, ಅರಿಶಿಣ, ಕುಂಕುಮ, ಪುಪ್ಪ ಸುಮಂಗಲ ದ್ರವ್ಯಗಳಿಂದ ಅಭಿಷೇಕ, ರುದ್ರಾಭಿಷೇಕ ಪೂಜೆ ಹಾಗೂ ಅಲಂಕೃತ ದೇವರ ಪಲ್ಲಕ್ಕಿ ಸೇವೆ ಭಜನೆಗಳು ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶಾಸಕ ಎಚ್.ಆರ್.ಗವಿಯಪ್ಪ, ನಗರಸಭೆಯ ಉಪಾಧ್ಯಕ್ಷ ಜೆ.ಎಸ್.ರಮೇಶ್‌ಗುಪ್ತಾ, ಸಂಘದ ಅಧ್ಯಕ್ಷ ಕಾಕುಬಾಳ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್, ಪ್ರಮುಖರಾದ ಪುಣ್ಯಮೂರ್ತಿ ಪಾಂಡುರAಗ, ವಿ.ಆರ್.ಪ್ರವೀಣ್‌ಕುಮಾರ, ಭೂಪಾಳ ರಮೇಶ್, ಸತೀಶ್ ಸೂರಿಶೆಟ್ಟಿ, ಹಿಟ್ನಾಳ್ ಮಂಜುನಾಥ ಇತರರಿದ್ದರು.