

ಹೊಸಪೇಟೆ: ಗಾಂಧೀಜಿ ಹಾಗೂ ಲಾಲ್ ಬಹುದ್ದರ್ ಶಾಸ್ತ್ರಿ ಜಯಂತಿ ನಿಮಿತ್ತ ಗೃಹರಕ್ಷಕದಳದಿಂದ ಕುಷ್ಟ ರೋಗಿಗಳಿಗೆ ಬ್ರೆಡ್ ಹಾಲು ಬಾಳೆಹಣ್ಣು ವಿತರಣೆ ಮಾಡಿದರು. ಹಾಗೂ ಕಮಲಾಪುರ ಘಟಕದಲ್ಲೂ ಆಚರಣೆ ಮಾಡಲಾಯಿತು.
ಜಿಲ್ಲಾ ಸಮಾದೇಷ್ಟ ಬಸವರಾಜ್ ಅಗಸರ, ಜಿಲ್ಲಾ ಬೋಧಕ ಪ್ರಶಾಂತ್ ಪಾಟೀಲ್ ಅವರು ಮಹಾನೀಯರ ಭಾವಚಿತ್ರಕ್ಕೆ ಪೂಜಿಸಿದರು. ನಂತರ ಬಳ್ಳಾರಿ ರಸ್ತೆಯ ಮುಕ್ತಿ ಆಶ್ರಮಕ್ಕೆ ತೆರಳಿ ಕುಷ್ಟ ರೋಗಿಗಳಿಗೆ ಬಾಳೆಹಣ್ಣು, ಬ್ರೆಡ್, ಹಾಲು ವಿತರಣೆ ಮಾಡುವ ಮೂಲಕ ಮಹಾತ್ಮರ ಜನ್ಮ ದಿನಾಚರಣೆ ಆಚರಿಸಲಾಯಿತು.
ಘಟಕಾಧಿಕಾರಿಗಳಾದ ಎಸ್.ಎಂ.ಗಿರೀಶ್, ಎಲ್.ವಾಲ್ಯ ನಾಯ್ಕ, ವಿ.ಪರಶುರಾಮ್, ಎಫ್.ಡಿ.ಎ. ಸಂತೋಷ್ ಇತರರಿದ್ದರು.