ಹೊಸಪೇಟೆ: ಮಹಾನ್ ಚೇತನ ಹಾಗೂ ಉತ್ತಮ ನಾಯಕರಾಗಿ ಭಾರತದ ಸ್ವಾತಂತ್ರ÷್ಯ ಹೋರಾಟದಲ್ಲಿ ಭಾಗವಹಿಸಿ ಧ್ರುವ ನಕ್ಷತ್ರದಂತೆ ಗಾಂಧೀಜಿ ಮತ್ತು ಲಾಲ್ ಬಹದ್ದೂರ್‌ಶಾಸ್ತಿç ಇಬ್ಬರೂ ಮಹನೀಯರು ಹೋರಾಡಿ ಮಡಿದವರು ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಬುಧವಾರ ರಾಷ್ಟಿçÃಯ ಸೇವಾ ಯೋಜನೆ ಘಟಕದಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡಿದರು.
ಕಾಲಕ್ರಮೇಣ ನಾವು ಅದರ್ಶ ವ್ಯಕ್ತಿಗಳನ್ನು ಮರೆಯುತ್ತಾ ಬಂದಿದ್ದೇವೆ. ಗಾಂಧೀಜಿ ಅವರ ಸರಳ ಹಾಗೂ ಮಾದರಿ ಜೀವನವನ್ನು ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಬಡತನ ಭ್ರಷ್ಟಾಚಾರ ಅತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಿಂಸಾಚಾರವೆAಬುದು ಮಾನವ ಕುಲವೇ ನಲುಗುವಂತೆ ಮಾಡುತ್ತಿದೆ. ಇಂದು ನಾವು ಸ್ವಾರ್ಥ ಸಾಧನೆಯಲ್ಲಿ ಬದುಕುತ್ತಿದ್ದೇವೆ. ನಾವು ಇನ್ನೊಬ್ಬರ ಜೀವನದಲ್ಲಿ ಕಂಠಕವಾಗಿ ಬದುಕಬಾರದು. ಗಾಂಧೀಜಿಯವರ ಆತ್ಮಶಕ್ತಿ ಮತ್ತು ದೇಶದ ಯುವ ಶಕ್ತಿಯೊಂದಿಗೆ ರಾಮ ರಾಜ್ಯದ ಕನಸು ನನಸಾಗಲಿ ಎಂದರು.
ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಕುಲಪತಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.
ವಿವಿಯ ವಿವಿಧ ವಿಭಾಗದ ಡೀನ್‌ಗಳಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಚಲುವರಾಜು, ಡಾ.ಶೈಲಜ ಇಂ.ಹಿರೇಮಠ, ಡಾ.ಅಮರೇಶ್ ಯತಗಲ್, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಎ.ಶ್ರೀಧರ್, ಉಪಕುಲಸಚಿವ ಡಾ.ಎ.ವೆಂಕಟೇಶ ಇತರರಿದ್ದರು.