ಮಹನೀಯರ ತತ್ವಾದರ್ಶ ಯುವಜನತೆ ಪಾಲಿಸಿ

02 MANJU 11
Published on

ಹೊಸಪೇಟೆ: ಜಗತ್ತಿಗೆ ಸತ್ಯ, ಅಹಿಂಸೆ ಮತ್ತು ಸಮಾನತೆಯನ್ನು ಸಾರಿದ ಮಹಾಧೂತ ಹೆಮ್ಮೆಯ ರಾಷ್ಟçಪಿತ ಮಹಾತ್ಮ ಗಾಂಧೀಜಿ ವಿಶ್ವಮಾನವರೆನಿಸಿಕೊಂಡಿದ್ದಾರೆ ಎಂದು ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಹೇಳಿದರು.

ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಾತ್ಮ ಗಾಂಧೀ ಮತ್ತು ಲಾಲ್ ಬಹದ್ದೂರು ಶಾಸ್ತಿç ಜಯಂತಿಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

ಬ್ರಿಟೀಷರ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿ ದೇಶವನ್ನು ದಾಸ್ಯಮುಕ್ತಗೊಳಿಸಿದ ಮಹಾನ್ ಹೋರಾಟಗಾರರಲ್ಲಿ ಮಹಾತ್ಮ ಗಾಂಧೀಜಿ ಅಗ್ರಗಣ್ಯರು. ಕೆಲವು ಸಿದ್ಧಾಂತಗಳನ್ನು ಬೋಧಿಸಬಹುದು ಆದರೆ ಪಾಲಿಸುವುದು ಕಷ್ಟ. ಸಿದ್ದಾಂತಗಳAತೆ ಬದುಕಿ ಮಹಾತ್ಮ ಆದವರು ಗಾಂಧೀಜಿ. ಅಹಿಂಸೆಯನ್ನು ಇಡೀ ವಿಶ್ವಕ್ಕೆ ಸಾರಿದ ಮಹನೀಯರು. ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತಿçಯವರ ತ್ಯಾಗ, ಬಲಿದಾನ ಮತ್ತು ಸ್ವಾಭಿಮಾನ ಆದರ್ಶಪ್ರಾಯವಾಗಿದೆ. ಇವರಿಬ್ಬರು ಮಹನೀಯರ ತತ್ವಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಿದೆ.

ಜಿಲ್ಲಾ ಮಟ್ಟದ ಬಾಪು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ, ಪದವಿಪೂರ್ವ ಕಾಲೇಜು ವಿಭಾಗ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿಜೇತ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಟಿ.ಬಿ.ಡ್ಯಾಂ ಪೊಲೀಸ್ ವೃತ್ತ ನಿರೀಕ್ಷಕರಾದ ವಿ.ನಾರಾಯಣ, ಜಿಲ್ಲಾಧಿಕಾರಿ ಕಚೇರಿ ಲೆಕ್ಕ ಪರಿಶೋಧಕ ಶ್ರೀನಿವಾಸ್, ವಾರ್ತಾ ಇಲಾಖೆ ಸಿಬ್ಬಂದಿಗಳಾದ ರಾಮಾಂಜನೇಯ, ಅಶೋಕ್ ಉಪ್ಪಾರ, ತಾಯೇಶ್, ತಿಪ್ಪೇಶ್, ದೇವರಾಜ, ಪಿ.ಕೃಷ್ಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net