ಗೌರಿ-ಗಣೇಶ ಹಬ್ಬ ಖರೀದಿ ಜೋರು

06 MAJU 03
Published on

ಹೊಸಪೇಟೆ: ಗೌರಿ-ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿAದ ಆಚರಿಸಲು ನಗರ ಸೇರಿದಂತೆ ಜಿಲ್ಲೆಯ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.

ನಗರದ ಗಾಂಧಿ ವೃತ್ತ, ಸಂಗೋಳ್ಳಿರಾಯಣ್ಣ ವೃತ್ತ, ಮದಕರಿ ನಾಯಕ ವೃತ್ತ, ಡ್ಯಾಂ ರಸ್ತೆ ಸೇರಿದಂತೆ ಹಲವು ಬಡಾವಣೆ, ರಸ್ತೆ ಬದಿಗಳಲ್ಲಿ ಗೌರಿ- ಗಣೇಶನ ಮೂರ್ತಿಗಳು, ಹಬ್ಬಕ್ಕೆ ಬೇಕಾದ ಹೂವು-ಹಣ್ಣು, ಬಾಳೆಕಂದು, ಗರಿಕೆ ಮಾರಾಟ ಭರ್ಜರಿಯಾಗಿಯೇ ನಡೆಯಿತು. ಗೌರಿಗೆ ಬೇಕಾದ ಬಾಗಿನ, ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಇದರೊಂದಿಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಜನರು ವಿಶೇಷವಾಗಿ ಖರೀದಿಸುತ್ತಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದ್ದು, ನಗರ ಸೇರಿದಂತೆ ಜಿಲ್ಲೆಯ ಪಟ್ಟಣ ಹಾಗೂ ಹೋಬಳಿಗಳ ಪ್ರಮುಖ ರಸ್ತೆಗಳ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು. ಇನ್ನೂ ನಗರದಿಂದ ದೂರದ ಊರುಗಳಿಗೆ ಹೋಗುವ ಗಣೇಶ ಮೂರ್ತಿಗಳನ್ನು ಸಮೀತಿಗಳ ಮುಖ್ಯಸ್ಥರು ಒಂದು ದಿನ ಮುನ್ನ ಶುಕ್ರವಾರನೇ ವಾಹನಗಳಲ್ಲಿ ಕೊಂಡೊಯ್ದರು.

ವಿವಿಧೆಡೆ ಟ್ರಾಫಿಕ್ ದಟ್ಟಣೆ

ನಗರದ ಎಲ್ಲ ಅಂಗಡಿಗಳು, ಮಾಲ್‌ಗಳಲ್ಲಿ ಜನರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ನಗರದ ಭಾಗಗಳಲ್ಲಿ ಟ್ರಾಫಿಕ್ ದಟ್ಟಣೆ ಕಂಡುಬAತು. ಈ ನಡುವೆ ಮೊಡಕವಿದ ವಾತಾವರಣ ಇದ್ದರು ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿರಲಿಲ್ಲ. ರಾತ್ರಿಯವರೆಗೂ ಜನರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬAತು.

ಪೊಲೀಸ್ ಪಥ ಸಂಚಲನ

ಗಣಪತಿ ಹಬ್ಬದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಎಸ್ಪಿ ಬಿ.ಎಲ್.ಶ್ರೀಹರಿಬಾಬು ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥ ಸಂಚಲನೆ ನಡೆಯಿತು. ಪೊಲೀಸರು ಸೇರಿದಂತೆ ಮೀಸಲು ಪೊಲೀಸ್ ಪಡೆ, ಗೃಹರಕ್ಷಲದಳ ಸಿಬ್ಬಂದಿ ವರ್ಗದವರು ನಗರ ಪೊಲೀಸ್ ಠಾಣೆಯಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಪೊಲೀಸ್ ಪಥ ಸಂಚಲನ ನಡೆಸಿದರು. ಎಎಸ್ಪಿ ಸಲಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net