

ಹೊಸಪೇಟೆ: ಇಲ್ಲಿನ ತಾಯಮ್ಮ ಶಕ್ತಿ ಸಂWದಿAದ ಪ್ರತಿವರ್ಷದಂತೆ ಈ ಬಾರಿಯೂ ಸಹ ಅತ್ಯುತ್ತಮ ಗಣಪತಿ ಮೂರ್ತಿಗಳಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ನೀಡಿ, ಪ್ರೋತ್ಸಹಿಸಿದೆ.
ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮ ಗಣೇಶನ ಮೂರ್ತಿಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ ಬಹುಮಾನ 20 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ ಹಾಗೂ ಸಮಾಧಾನಕರ 5 ಸಾವಿರ ರೂ, ನಗದು ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.
ನಗರದ ಚಿತ್ರಕೇರಿ ಯುವಕರ ಸಂಘ(ಬಳಗ)ಪ್ರಥಮ ಬಹುಮಾನ, ಟಿ.ಬಿ.ಡ್ಯಾಂನ ಮಹಾಗಣಪತಿ ಯುವಕ ಮಂಡಳಿ ದ್ವಿತೀಯ, ವಿಜಯನಗರ ಪ್ರಖ್ಯಾತ ಅರಸ ಶ್ರೀ ಕೃಷ್ಣ ದೇವರಾಯ ಗಣಪತಿಯನ್ನು ಪ್ರತಿಷ್ಠಾಪಿಸಿ, ಜನಮನ್ನಣೆಗೆ ಪಾತ್ರವಾದ ಚಿತ್ತವಾಡ್ಗಿ ಗಜಾನನ ಯುವಕರ ಸಂಘ, ತೃತೀಯ ಬಹುಮಾನ ಪಡೆದುಕೊಂಡಿದೆ. ಛಲವಾದಿ ಯುವಕರ ಸಂಘ ಹಾಗೂ ಬಾಣದಕೇರಿ ಕದಂಬ ಯುವಕರ ಸಂಘಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.