ಇಂದನ ಬೆಲೆ ಏರಿಕೆಯಿಂದ ಅನ್ಯಾಯ

07 MANJU 03
Published on

ಹೊಸಪೇಟೆ: ಇಂದನ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ವಿಜಯಬಗರ ಜಿಲ್ಲಾ ಲಾರಿ ಮಾಲಿಕರ ಸಂಘದಿAದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮೂಲಕ ಸಿಎಂ ಸಿದ್ದರಾಮಯ್ಯಗೆ ಸೋಮವಾರ ಮನವಿ ರವಾನಿಸಿದರು.

ಕಳೆದ ವಾರ ರಾಜ್ಯ ಸರ್ಕಾರವು ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡಿರುವುದು ಸರಕು ಸಾಗಾಣಿಕೆ ಉದ್ಯಮವು ತತ್ತರಿಸುವಂತೆ ಮಾಡಿದೆ. ಕಳೆದ ಕರೋನಾ ಸಮಯದಿಂದ ರೋಗಿಯನ್ನು ತುರ್ತು ನಿಗಾ ಘಟಕ್ಕೆ ವರ್ಗಾಯಿಸಿದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ 1.52 ರೂ. ಹೆಚ್ಚಿಸಿದೆ. ಮತ್ತೆ 2 ರೂ. ಹೆಚ್ಚಿಗೆ ಮಾಡಿರುವುದು ಇದ್ಯಾವ ನ್ಯಾಯ? ದೇಶದ ಸರಕು ಸಾರಿಗೆ ವ್ಯವಸ್ಥೆಯು ದೇಶದ ಭುಜಗಳಂತೆ ಆರ್ಥಿಕ ಭಾರವನ್ನು ಹೋರುವಂತಹ ನಮಗೆ ಈ ಬೆಲೆ ಏರಿಕೆಯು ರೋಗಗ್ರಸ್ತರನ್ನಾಗಿ ಮಾಡಿದೆ. ಬೆಲೆ ಹೆಚ್ಚಳದಿಂದ ಸರಕು ಸಾಗಾಣಿಕೆಯ ಪ್ರತಿ ವಸ್ತುಗಳ ಮೇಲೆ ಆರ್ಥಿಕವಾಗಿ ದುಪ್ಪಟ್ಟು ಹಾಗೂ ಜನಸಾಮಾನ್ಯರಿಗೆ ಸಂಕಷ್ಟ ತಂದೂಡುತ್ತದೆ. ಅಲ್ಲದೇ ವಾಹನಗಳ ಪೈನಾನ್ಸ್ ಮತ್ತು ಟ್ಯಾಕ್ಸ್ಗಳ ದುಬಾರಿ ವ್ಯವಯದೊಂದಿಗೆ ಕಡಿಮೆ ಬಾಡಿಗೆಯಲ್ಲಿ ದುಡಿದು ಜೀವನ ನಡೆಸುವಂತಾಗಿದೆ. ಇದರಿಂದ ಲಾರಿ ಮಾಲೀಕರು ಸಾಲ ಸುಳಿಯಲ್ಲಿ ಸಿಲುಕುವಂತಾಗಿದೆ. ಇತರರಿಗೆ ಉದ್ಯೋಗ ನೀಡುವ ಮಾಲೀಕರು ಸ್ವಯಂ ಲಾರಿ ಚಲಾಯಿಸುತ್ತಿದ್ದಾರೆ. ಇದರ ನಡುವೆ ಬೆಲೆ ಏರಿಕೆಯಿಂದ ಇನಷ್ಟು ತತ್ತರಿಸುವಂತೆ ಮಾಡಿದೆ. ಏರಿಕೆ ಮಾಡಿರುವ ತೆರಿಗೆಯಿಂದ ನ್ಯಾಯ ಒದಗಿಸಬೇಕಿದೆ ಎಂದು ಒತ್ತಾಯಿಸಿದರು.

ಪ್ರಮುಖರಾದ ಎಚ್.ಮೆಹಬೂಬ್, ಕೆ.ಎಸ್.ಮಣಿ, ಪಿ.ವಿ.ವೆಂಕಟೇಶ, ಎಚ್.ಶಬ್ಬೀರ್, ಗುಜ್ಜಲ ಗಣೇಶ್, ನಾಣಿಕೇರಿ ಸಾದಾಶಿವ, ಎಲ್.ರಫೀಕ್, ಏರಿಸ್ವಾಮಿ, ಫಕೃದೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net