

ಹೊಸಪೇಟೆ: ದಂಪತಿಗಳು ಜೀವನ ರಥದ ಎರಡು ಚಕ್ರಗಳಿದ್ದ ಹಾಗೆ, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನವನ್ನು ಸಾಗಿಸಬೇಕು ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪ್ರವಾಸೋದ್ಯಮ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ನಗರದ ಕಾರಿನೂರಿನ ಶ್ರೀ ಪಾಂಡುರAಗ ದೇಗುಲದಲ್ಲಿ ಭಾನುವಾರ ನೂತನ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮದುವೆ ಎಂದರೆ ಕೇವಲ ಒಂದು ಗಂಡು ಹೆಣ್ಣಿನ ಸಮ್ಮಿಲನ ಅಷ್ಟೇ ಅಲ್ಲ, ಜೀವನ ರಥದ ಎರಡು ಚಕ್ರಗಳಿದ್ದ ಹಾಗೆ. ಆದ್ದರಿಂದ ಪ್ರತಿನಿತ್ಯವೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನವನ್ನು ಸಾಗಿಸಬೇಕು. ಅನಾವಶ್ಯಕ ಕಾರಣಗಳಿಗೆ ಅಥವಾ ಮೂರನೇ ವ್ಯಕ್ತಿಗಳ ಚುಚ್ಚು ಮಾತುಗಳಿಗೆ ಬಲಿಯಾಗದೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕು. ಇಲ್ಲದಿದ್ದರೆ ಚುಚ್ಚು ಮಾತುಗಳಿಗೆ ಸಂಸಾರಗಳು ಬಲಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಅತ್ಯಂತ ವಿಜ್ರಂಭಣೆಯಲ್ಲಿ ಹಣವನ್ನು ದುಂದು ವೆಚ್ಚ ಮಾಡುವುದೇ ಆಗಿರುತ್ತದೆ. ಈ ರೀತಿ ಮಾಡುವುದರಿಂದ ಹೆಣ್ಣಿನ ಮನೆಯವರಿಗೂ ಹಾಗೂ ಗಂಡನ ಮನೆಯವರಿಗೂ ವಿಪರೀತವಾದ ಆರ್ಥಿಕವಾಗಿ ಹೊರೆಯಾಗಿ ಸಾಲ ಸುಳಿಯಲ್ಲಿ ಸಿಲುಕುತ್ತಾರೆ. ಆದ್ದರಿಂದ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ಒಂದು ರೀತಿಯ ವರದಾನವಾಗಿರುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರು ಸಾಮೂಹಿಕ ವಿವಾಹದ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಗಂ
ಗಾವತಿಯ ಬೃಹನ್ ಮಠದ ಪೂಜಾರಿ ಗವಿಸಿದ್ದೇಶ್ವರ ತಾತನವರು, ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾನ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ, ಸದಸ್ಯರಾದ ಎಚ್.ಕೆ.ಮಂಜುನಾಥ್, ಗುಜ್ಜಲ್ ಗಣೇಶ್, ಪಿ.ವೆಂಕಟೇಶ್, ಬೋಡ ರಾಮಪ್ಪ, ಪ್ರಮುಖರಾದ ಪರಮೇಶ್ವರ, ರಂಗಯ್ಯ, ಯರಿಸ್ವಾಮಿ ಜಡಿಯಪ್ಪ ಇತರರಿದ್ದರು.