ಮಾಜಿ ಸಚಿವ ಆನಂದ್ ಸಿಂಗ್ಗೆ ಬಿಗ್ ರಿಲೀಫ್

hosapete
anandsing
Published on

ಹೊಸಪೇಟೆ: ಅಕ್ರಮ ಗಣಿಗಾರಿಕೆ ಪ್ರಕರಣಯೊಂದರಲ್ಲಿ ಮಾಜಿ ಸಚಿವ ಆನಂದ ಸಿಂಗ್‌ಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶುಕ್ರವಾರ ಬಿಗ್ ರಿಲೀಫ್ ನೀಡಿದೆ.

ಮಾಜಿ ಸಚಿವ ಆನಂದ ಸಿಂಗ್ ವ್ಯಾಸನಕೆರೆ ಪ್ರದೇಶದ ಎಸ್.ಬಿ.ಮಿನಿರಲ್ಸ್ನಲ್ಲಿ 16, 687 ಮೆಟ್ರಿಕ್ ಟನ್ ಅದಿರು ರಾಜಧನ ವಂಚಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ಗೋವಾ ಸಚಿವ ರೋಹನ್ ಕೌಂಟೆ ವಿರುದ್ಧವೂ ಆರೋಪ ಹೊರಿಸಲಾಗಿತ್ತು. ಲೋಕಾಯುಕ್ತ ವಿಶೇಷ ತನಿಖಾ ತಂಡ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆದು, ಈಗ ನ್ಯಾಯಾಲಯ ಖುಲಾಸೆಗೊಳಿಸಿದೆ.

ಆನಂದ್ ಸಿಂಗ್ ಅವರು ವಿಜಯನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಲ್ಲದೇ, ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ವಿಜಯನಗರ ಜಿಲ್ಲಾ ರಚನೆ ಮಾಡಿದ ಹೆಗ್ಗಳಿಕೆ ಅವರಿಗಿದೆ. ಚುನಾವಣೆ ನಂತರ ಸಾರ್ವಜನಿಕ ಸಭೆ, ಸಮಾರಂಭಗಳಿAದಲೂ ದೂರ ಉಳಿದಿದ್ದರು. ಈಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಗ್ ರಿಲೀಫ್ ದೊರೆತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಒಡಮೂಡಿದೆ. ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾ ಸಿಕ್ಕಿದೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರೀಕರಿಸಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯೂ ಹುಟ್ಟಿದೆ. ಆದರೆ, ಸಿಬಿಐ ಸೇರಿದಂತೆ ಇನ್ನುಳಿದ ಪ್ರಕರಣಗಳ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಈಗಲೇ ಅವರು ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ಈ ಪ್ರಕರಣದಲ್ಲಿ ಗೋವಾದ ಸಚಿವರಿಗೂ ರಿಲೀಫ್ ದೊರೆತಿದೆ ಎಂದು ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net