ಬಡಾವಣೆ ನಿವೇಶನಗಳಿಗೆ ಫಾರ್ಮ್ ನಂ.3 ನೀಡಿ; ಎಡಿಸಿ ಮಹೇಶ್ ಬಾಬುಗೆ ಶಿವಜ್ಯೋತಿ ಕ್ಷೇಮಾಭಿವೃದ್ಧಿ ಸಂಘದ ಮನವಿ

08022022 Hospet appeals
Published on

ಹೊಸಪೇಟೆ: ನಗರದ ಶಿವಜ್ಯೋತಿ ಬಡಾವಣೆ ನಿವೇಶನಗಳಿಗೆ ಫಾರ್ಮ್ ನಂ. 3 ನೀಡುವಂತೆ ಒತ್ತಾಯಿಸಿ ಶಿವಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ವಿಜಯನಗರ ನಾಗರಿಕ ವೇದಿಕೆ ಪದಾಧಿಕಾರಿಗಳು ಎಡಿಸಿ ಮಹೇಶ್ ಬಾಬುಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಡಾವಣೆಯಲ್ಲಿರುವ ಎಲ್ಲ್ಲ ಸರ್ವೇ ನಂಬರ್ ಭೂಮಿಗಳು ಬಳ್ಳಾರಿ ಜಿಲ್ಲಾಧಿಕಾರಿ ಆದೇಶದನ್ವಯ ಎನ್.ಎ. ಆಗಿವೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ವಿನ್ಯಾಸ ಲೇಔಟ್ ಮಂಜೂರು ಮಾಡಿ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಅದರಂತೆ ಅನೇಕರು ನಿವೇಶನ ಖರೀದಿಸಿ, ಉಪನೊಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದೇವೆ. ಆದರೆ, ನಗರಸಭೆಯಲ್ಲಿ 8 ತಿಂಗಳಿಂದ ಫಾರ್ಮ್ ನಂ. 3 ನೀಡಲು ಮತ್ತು ಖಾತಾ ಬದಲಾವಣೆ ಮಾಡಲು ತಡೆ ಹಿಡಿಯಲಾಗಿದೆ. ಇದರಿಂದ ಸರ್ಕಾರಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ ಇತರೆ ಕಾರ್ಯಕ್ರಮಗಳಿಗೆ ಬ್ಯಾಂಕ್ ಲೋನ್ ಇತರೆ ಸೌಲಭ್ಯ ಪಡೆಯಲು ತೊಂದರೆಯಾಗಿದೆ. ನಗರಸಭೆ ಆಯುಕ್ತರನ್ನು ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತ ಅಂತಿಮ ಅನುಮೋದನೆ ಆಗಿರುವುದಿಲ್ಲ ಅಂತ ಮೌಖಿಕವಾಗಿ ತಿಳಿಸುತ್ತಾರೆ. ಇಲ್ಲಿಯವರೆಗೆ ನಿವೇಶನಗಳಿಗೆ ತೆರಿಗೆ ಕಟ್ಟಿಸಿಕೊಳ್ಳಲಾಗಿದೆ. ಕೆಲ ನಿವೇಶನಗಳ ಫಾರ್ಮ್ ನಂ.3 ಈಗಲು ನೀಡಿರುವುದು ಕಂಡುಬಂದಿದೆ. ಭ್ರಷ್ಟಾಚಾರದಿಂದ ಫಾರ್ಮ್ ನಂ.3 ವಿತರಿಸಲಾಗಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net