

ಹೊಸಪೇಟೆ: ಜನರ ಅಲೆದಾಟ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನಗರಸಭೆ ಅಧಿಕಾರಿಗಳು ಫಾರಂ 3 ನೀಡಲು ಮನೆ ಬಾಗಿಲಿಗೆ ಬರುತ್ತಾರೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜಾಧಿಕಾರಿ ಮನೋಹರ್ ತಿಳಿಸಿದರು.
ಇಲ್ಲಿನ ಸಂಕ್ಲಾಪುರದ ವಿನಾಯಕ ನಗರದ ಗ್ರಂಥಾಲಯದಲ್ಲಿ ನಗರಸಭೆಯಿಂದ ಭಾನುವಾರ ನಡೆದ ಫಾರಂ 3 ಮೇಳದಲ್ಲಿ ಮಾತನಾಡಿದರು.
ಪ್ರತಿ ಶನಿವಾರ ಹಾಗೂ ಭಾನುವಾರ ನಗರದ ವಿವಿಧ ಪ್ರದೇಶದಲ್ಲಿ ಫಾರಂ 3 ಮೇಳ ನಡೆಯಲಿದೆ. ಇದರಿಂದ ನಗರಸಭೆಯಲ್ಲಿ ಇದೀಗ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಹೊಸ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಇದರಿಂದ ಸಾರ್ವಜನಿಕರ ಅಲೆದಾಟ ತಪ್ಪುತ್ತದೆ ಎಂದರು.
ಈ ಮೇಳದಲ್ಲಿ ಪೌರಾಯುಕ್ತರು, ಎಂಜಿನಿಯರ್, ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ಸೇರಿದಂತೆ ಕಂಪ್ಯೂಟರ್ ಆಪರೇಟರ್‌ಗಳ ಕಾರ್ಯನಿರ್ವಹಿಸುತ್ತಾರೆ. ದಾಖಲೆ ಪರಿಶೀಲನೆ ಮಾಡಿ, ಅರ್ಧ ಗಂಟೆಯೊಳೆಗೆ ಫಾರಂ 3 ನವೀಕರಣ ಮಾಡುತ್ತಾರೆ. ಖಾತೆ ಬದಲಾವಣೆಗೆ ಅಲ್ಲೇ ನೋಟಿಫಿಕೇಷನ್ ಮಾಡಿಕೊಡಲಿದ್ದಾರೆ ಎಂದರು.
ಭಾನುವಾರ ಬೆಳಗ್ಗೆ 10.30 ಗಂಟೆಯಿAದ 5 ಗಂಟೆಯ ವರೆಗೆ ನಡೆದ ಫಾರಂ 3 ಮೇಳದಲ್ಲಿ ನಗರದ 22ನೆ ವಾರ್ಡ್ ಸಂಕಲಾಪುರದಲ್ಲಿ ಪ್ರದೇಶದಲ್ಲಿ ಫಾರಂ 03 ಹೊಸ ಅರ್ಜಿಯಲ್ಲಿ 14, ನವೀಕರಣ ಅರ್ಜಿ 88, ತಿದ್ದುಪಡಿ ಅರ್ಜಿ 06 ಬಂದಿದ್ದವು. ಇವುಗಳಲ್ಲಿ 08 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. 5 ಗಂಟೆ ನಂತರ ಇನ್ನೂ ಜನ ಅರ್ಜಿಗಳನ್ನು ನೀಡುತ್ತಿದ್ದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ವ್ಯವಸ್ಥಾಪಕ ಕೃಷ್ಣಮೂರ್ತಿ, ಆರ್‌ಒ ನಾಗರಾಜ್ ಇತರರಿದ್ದರು.