ಅರಣ್ಯದಲ್ಲಿ ಸದಾ ಎಚ್ಚರಿಕೆ ಇರಲಿ

Oplus_131072
Oplus_131072
Published on

ಹೊಸಪೇಟೆ: ಅರಣ್ಯ ಸಂರಕ್ಷಣೆಯಲ್ಲಿ ಸೈನಿಕರಂತೆ ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳು ಸಂಕಷ್ಟಗಳ ನಡುವೆ ಸೇವೆ ಸಲ್ಲಿಸುತ್ತಿರುವುದು ಸ್ಮರಣಿಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮ ಹೇಳಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಿಮಿತ್ತ ವನ್ಯಜೀವಿ ಹಾಗೂ ಪ್ರದೇಶಿಕ ಅರಣ್ಯ ವಿಭಾಗ ಸಹಯೋಗದಲ್ಲಿ ನಗರದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ಸಲ್ಲಿಸಿದರು.

ಅರಣ್ಯ ಸೇವೆ ವೇಳೆ ಮೃತಪಟ್ಟವರ ಸ್ಮರಣೆಗಾಗಿ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಅರಣ್ಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದಲೇ ಅರಣ್ಯಗಳು ಉಳಿಯುತ್ತಿವೆ ಎಂದರು.

ಸದಾ ಕುಟುಂಬದಿAದ ದೂರವಿದ್ದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಅರಣ್ಯದಲ್ಲಿ ಸದಾ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತಮ್ಮ ಕುಟುಂಬಗಳ ಬಗ್ಗೆ ಯೋಚಿಸ ಬೇಕಿದೆ. ಎಲ್ಲರೂ ಕಡ್ಡಾಯವಾಗಿ ವಿಮೆ ಸೇರಿದಂತೆ ಉಳಿತಾಯ, ಮಕ್ಕಳ ಶಿಕ್ಷಣದ ಕಡೆಗೂ ಗಮನವಿರಲಿ, ಎಲ್ಲಾ ಮಾಹಿತಿಗಳು ನಿಮ್ಮ ಕುಟುಂಬಕ್ಕೆ ತಿಳಿದಿರಬೇಕು ಎಂದು ಸಲಹೆ ನೀಡಿದರು.

ಎಸಿಎಫ್‌ಗಳಾದ ಕಿರುಬನಂತನ್, ಭಾಸ್ಕರ್, ಪ್ರೋಬೇಷನರಿ ಎಸಿಫ್ ಶಿವನಂದ್, ಆರ್‌ಎಫ್‌ಒಗಳಾದ ಕೌಶಿಕ್, ರಾಜುಗೊಂದಕರ್, ಬಸವರಾಜ್, ಉಮೇಶ್, ರಾಜೇಶ್ ಗಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net