ಬೋನಿಗೆ ಸೆರೆಯಾದ ಕರಡಿ

news
ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಬಳಿ ಬೋನಿಗೆ ಬಿದ್ದ ಕರಡಿ.
Published on

ಹೊಸಪೇಟೆ: ತಾಲೂಕಿನ ಬುಕ್ಕಸಾಗರ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಕರಡಿಯೊಂದು ಬುಧವಾರ ಬಿದ್ದಿದೆ.

ಕಳೆದ ಕೆಲ ದಿನಗಳಿಂದ ಬುಕ್ಕಸಾಗರ, ಹಂಪಿ ಭಾಗದಲ್ಲಿ ಕರಡಿ ಓಡಾಡುತ್ತಿತ್ತು. ರೈತರ ಹೊಲ-ಗದ್ದೆಯನ್ನೂ ಹಾಳು ಮಾಡಿತ್ತು. ಈ ಕರಡಿ ಬುಕ್ಕಸಾಗರ ಭಾಗದಲ್ಲಿ ರಾಮಾಂಜೀನಿ, ರಾಜೇಶ್ವರಿ ಎಂಬವರ ಮೇಲೂ ದಾಳಿ ನಡೆಸಿತ್ತು. ಈಗ ಕರಡಿ ಸೆರೆಯಾಗಿರುವುದರಿಂದ ಬುಕ್ಕಸಾಗರ, ವೆಂಕಟಾಪುರ, ರಾಮಸಾಗರ, ಹಂಪಿ ಭಾಗದ ಜನರು ನೀರಾಳರಾಗಿದ್ದಾರೆ. ಅರಣ್ಯ ಇಲಾಖೆಯ ಬಿ. ರಾಘವೇಂದ್ರ, ನಾಗಣ್ಣ ಎಂಬವರು ಬೋನಿಗೆ ಬಿದ್ದ ಕರಡಿಯನ್ನು ದರೋಜಿ ಕರಡಿಧಾಮಕ್ಕೆ ಬಿಟ್ಟು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net