ಕಾರ್ಮಿಕರಿಗೆ ಕಾನೂನು ಅರಿವು ಮೂಡಲಿ

21 MANJU 03
Published on

ಹೊಸಪೇಟೆ: ಕಾರ್ಮಿಕರಿಗೆ ಕಾಯ್ದೆ, ಕಾನೂನು ತುಂಬಾ ಅವಶ್ಯಕವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ದೊಂಬರಮತ್ತೂರ್ ಹೇಳಿದರು.

ನಗರದ ರೋಟರಿ ಕ್ಲಬ್‌ನಲ್ಲಿ ಶನಿವಾರ ಉದ್ಯೋಗದಾತರಿಗೆ, ಹೊರಗುತ್ತಿಗೆ ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾನೂನುಗಳು ಮತ್ತು ಯೋಜನೆಗಳ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೊಸ- ಹೊಸ ಕಾನೂನು, ಯೋಜನೆಗಳ ಬಗ್ಗೆ ತಿಳಿದುಕೊಂಡರೆ ರಾರ್ಷ್ಟ ನಿರ್ಮಾಣ ಕಾರ್ಯಕ್ಕೆ ನಾವು ಕೊಡುಗೆ ನೀಡಬಹುದು. ಬದಲಾದ ಸನ್ನಿವೇಶದಲ್ಲಿ ಹೊಸ- ಹೊಸ ಕಾನೂನು, ಕಾಯ್ದೆಗಳು ಬರುತ್ತವೆ. ಅವುಗಳ ಕುರಿತು ಸಮರ್ಪಕ ಮಾಹಿತಿ ಹೊಂದದಿದ್ದಲ್ಲಿ ಪ್ರತಿ ಹಂತದಲ್ಲಿ ವಿಫಲರಾಗುತ್ತೇವೆ. ಹೀಗಾಗಿ ಎಲ್ಲರೂ ಕಾನೂನುಗಳಲ್ಲು ಮಾಹಿತಿ ಪಡೆದುಕೊಳ್ಳಬೇಕು. ಹಾಗೂ ಇಲಾಖೆಯಲ್ಲಿ ಬರುವ ಯೋಜನೆಗಳನ್ನು ನೈಜ ಫಲಾನುಭವಿಗಳು ಸದುಪಯೋಗ ಪಡೆಯಬೇಕು. ಈ ಹಿಂದೆ ಇದ್ದ ಕಾನೂನುಗಳನ್ನು ನವೀಕರಣ ಮಾಡಲಾಗುತ್ತಿದೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಕಾರ್ಮಿಕರಿಗೆ ಕಾನೂನು ಮಾಹಿತಿ ಅವಶ್ಯಕ ಎಂದರು.

ಚೇAಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೋತಂಬರಿ ಮಾತನಾಡಿ, ಭಾರತ ಅಭಿವೃದ್ಧಿ ಆಗಬೇಕಾದರೆ ಇಂತಹ ಕೈಗಾರಿಕಾ ಕಾನೂನು, ಕಾಯ್ದೆಗಳು ಅವಶ್ಯಕ. ಕೈಗಾರಿಕೆ ಕಾನೂನು ಜಾರಿಗೆ ತರುವುದರ ಜತೆಗೆ ಸಮರ್ಪಕ ಅನುಷ್ಠಾನದ ಬಗ್ಗೆಯೂ ಕಾಳಜಿ ವಹಿಸಬೇಕು. ಕೇವಲ ಕಾಗದದಲ್ಲಿ ಉಳಿದರೆ ದೇಶದ ಅಭಿವೃದ್ಧಿ ನಿರೀಕ್ಷಿಸಲು ಆಗದು ಎಂದು ಅಭಿಪ್ರಾಯಪಟ್ಟರು.

ಇಎಸ್‌ಐ ಇಲಾಖೆಯ ಸ್ಥಾನಿಕಾಧಿಕಾರಿ ಬಸವರಾಜ್, ಫ್ಯಾಕ್ಟರಿ ಇಲಾಖೆಯ ಸಹಾಯಕ ನಿರ್ದೇಶಕ ವರುಣ್, ಕಾರ್ಮಿಕ ನಿರೀಕ್ಷಕ ಹಾಗೂ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಪಿಡಿ ಮೌನೇಶ್, ರೋಟರಿ ಕ್ಲಬ್ ಅಧ್ಯಕ್ಷ ದಿಲೀಪ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net