

ಹೊಸಪೇಟೆ: ಕನ್ನಡ ರಾಜ್ಯೋತ್ಸವ ನಿಮಿತ್ತ ರಾಜ್ಯ ಸರ್ಕಾರ ನೀಡುತ್ತಿರುವ ಕರ್ನಾಟಕ ಸಂಭ್ರಮ 50 ನಿಮಿತ್ತ ಜಿಲ್ಲೆಯ ಐದು ಜನರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಲಭಿಸಿದೆ.
ಹರಪನಹಳ್ಳಿಯ ತೆಗಿನಮಠ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಟಿ.ಎಂ.ಚAದ್ರಶೇಖರಯ್ಯ, ಹಗರಿ ಬೊಮ್ಮನಹಳ್ಳಿಯ ಹಂಪಸಾಗರದ ಜಾನಪದ ಕ್ಷೇತ್ರದಲ್ಲಿ ಗೊಂದಳಿ ರಾಮಪ್ಪ, ಮಾಧ್ಯಮ ಕ್ಷೇತ್ರದಲ್ಲಿ ನಗರದ ಕೆ.ಶಾಂತಕುಮಾರಿ, ಶಿಕ್ಷಣ ಕ್ಷೇತ್ರದಲ್ಲಿ ಭಾಗ್ಯಲಕ್ಷೀ ಹಾಗೂ ಕೃಷಿ ಕ್ಷೇತ್ರದಲ್ಲಿ ನಗರದ ಕಾರಿಗನೂರಿನ ನಾಗಮ್ಮಜ್ಜಿ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಲಭಿಸಿದೆ.