ಹೊಸಪೇಟೆ : ಈ ಸಾಲಿನ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆ ದ್ವಿದಳಧಾನ್ಯ ಕಾರ್ಯಕ್ರಮದಡಿ ರೈತ ಉತ್ಪಾದಕರ ಸಂಸ್ಥೆ, ಸ್ವ-ಸಹಾಯ ಗುಂಪುಗಳಿಗೆ ಮಾರುಕಟ್ಟೆ ಬೆಂಬಲ ಹಾಗೂ ನ್ಯೂಟ್ರಿಷಿಯನ್ ಸಿರಿಧಾನ್ಯ ಕಾರ್ಯಕ್ರಮದಡಿ ಸಿರಿಧಾನ್ಯಗಳ ಕಿಚನ್ ಸ್ಥಾಪನೆಗೆ, ಸಂಸ್ಕರಣಾ ಘಟಕಗಳ ಅಳವಡಿಕೆ, ಮಾರುಕಟ್ಟೆ ಬೆಂಬಲ ಮತ್ತು ಸಂಸ್ಕರಣಾ ಕ್ಲಸ್ಟರ್ ಸ್ಥಾಪನೆಗೆ ಸಹಾಯಧನ ನೀಡಲು ವಿಜಯನಗರ ಜಿಲ್ಲೆಯ ರೈತರು, ರೈತ ಉತ್ಪಾದಕರ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್ ತಿಳಿಸಿದ್ದಾರೆ.
ರೈತರು, ರೈತ ಉತ್ಪಾದಕರ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಾ.10 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ.