ಜಾನಪದ ವಿವಿಗೆ ಸಿಂಡಿಕೇಟ್‌ ಸದಸ್ಯೆ ಸಹನಾ ಪಿಂಜಾರ

news
Published on

ಹೊಸಪೇಟೆ: ಕಳೆದ ಮೂರು ದಶಕದಿಂದ ರಂಗಕಲೆಯಲ್ಲಿ ಜೀವನ ಸಾಗಿಸಿದ ನಗರ ಸಿದ್ದಲಿಂಗಪ್ಪಚೌಕಿಯ ನಿವಾಸಿ ಸಹನಾ ಪಿಂಜಾರ್ ಈಗ ಜಾನಪದ ವಿವಿಯ ಸಿಂಡಿಕೇಟ್ ಸದಸ್ಯೆಯಾಗಿದ್ದಾರೆ.

ನಗರದ ಸ್ಲಂ ಪ್ರದೇಶದ‌ ಹುಡುಗಿ ಸಹಾನ‌ಪಿಂಜಾರ್. ಬಳ್ಳಾರಿ‌ ಜಿಲ್ಲೆಯ ಕೆ.ವೀರಾಪುರ ಸಾಮಾನ್ಯ ಕುಟುಂಬದ ನಿವಾಸಿಯಾದ ಇವರು, ಬಾಲ್ಯದಲ್ಲಿಯೇ ಬೀದಿನಾಟಕಗಳ ಮೂಲಕ ರಂಗಪ್ರವೇಶ ಮಾಡಿದ ಸಹನಾ, ಸೋದರ‌ಮಾವ ಹಿರಿಯ ರಂಗಕರ್ಮಿ ಅಬ್ದುಲ್ ಅವರು ರೂಪಿಸಿದ ಭಾವೈಕ್ಯತಾ ವೇದಿಕೆಯಲ್ಲಿ ರೂಪುಗೊಂಡ ಕಲಾವಿದೆ. ಇವರು ರಾಜ್ಯದ ವಿವಿದ ಕಡೆ ತಮ್ಮ ರಂಗಕಲೆಯನ್ನು ಪ್ರದಶರ್ನ‌ ಮಾಡಿದ್ದಾರೆ. ಇವರ ಕಲೆಯನ್ನು ಗುರುತಿಸದ ರಾಜ್ಯ ಸರ್ಕಾರ ಜಾನಪದ ವಿವಿಯ ಸಿಂಡಿಕೇಟ್‍ಗೆ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಲಾಗಿದೆ.

ಎಸ್ಎಸ್ಎಲ್ ಸಿಯ ನಂತರ ನಿನಾಸಂ ನಲ್ಲಿ ತರಬೇತಿ ಪಡೆದು, ನಂತರ ಪದವಿ ವರೆಗೆ ವಿದ್ಯಾಭ್ಯಾಸ ಮಾಡಿದರು. ನಂತರ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದ ಸಹನಾ, ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ `ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ರಂಗವಿನ್ಯಾಸ’ದ ಕುರಿತು ಪಿಹೆಚ್ ಡಿ ಪಡೆದ ಸಹನಾ ಇದೀಗ ಕೃಷ್ಣದೇವರಾಯ ವಿವಿಯಲ್ಲಿ ಪ್ರದರ್ಶನ ಕಲಾ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕಿಯಾಗಿ ಮಕ್ಕಳಿಗೆ ರಂಗಭೂಮಿಯ ಪಾಠ ಹೇಳುತ್ತಿದ್ದಾರೆ.  ಸಹನಾ ರಂಗಭೂಮಿಯ ಹೊಸ ಕಲ್ಪನೆಗಳನ್ನಿಟ್ಟುಕೊಂಡ ಕನಸುಗಾರ್ತಿಗೆ ಒಂದು ಜವಾಬ್ದಾರಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net