ಹೊಸಪೇಟೆಯಲ್ಲಿನ ಧ್ವಜಸ್ತಂಭ ಸ್ಥಳಾಂತರಿಸಿ

27 MANJU 03
Published on

ಹೊಸಪೇಟೆ: 405 ಎತ್ತರದ ಧ್ವಜಸ್ತಂಭ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ನಗರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್‌ಗೆ ಮನವಿ ಸಲ್ಲಿಸಿದರು.

ನಗರದ ಮಧ್ಯಭಾಗದಲ್ಲಿರುವ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ 405 ಎತ್ತರದ ಧ್ವಜ ಸ್ತಂಭವು ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಹಲವಾರು ಪ್ರಗತಿಪರ ಮತ್ತು ಜನಪರ ಸಂಘಟನೆಗಳು ಧ್ವಜಸ್ತಂಬವನ್ನ ಕ್ರೀಡಾಂಗಣ ಮಧ್ಯದಲ್ಲಿ ಅಳವಡಿಸಲು ವಿರೋಧ ವ್ಯಕ್ತಪಡಿಸಿ ಸಂಬAಧಪಟ್ಟ ಅಧಿಕಾರಿಗಳಿಗೆ ದೂರು ಮತ್ತು ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಅಷ್ಟೆಲ್ಲ ವಿರೋಧ ವ್ಯಕ್ತಪಡಿಸಿದ್ದರು ಸಹ ಯಾವ ಹೋರಾಟಗಾರರಿಗೆ ಕಿಮ್ಮತ್ತನ್ನೆ ಕೊಡದೆ ಅಂದಿನ ಶಾಸಕ ಬೃಹತ್ ಗಾತ್ರದ ಧ್ವಜಸ್ತಂಭ ನಿರ್ಮಿಸಿಯೇ ಬಿಟ್ಟರು ಎಂದು ಆಗ್ರಹಿಸಿದರು.

ಈ ಧ್ವಜ ಸ್ತಂಭವು ಕ್ರೀಡಾಂಗಣ ಮಧ್ಯದಲ್ಲಿ ಇರುವುದರಿಂದ ಕ್ರೀಡಾಂಗಣವು ಪ್ರಯೋಜನಕ್ಕೆ ಬಾರದಂತಾಗಿದೆ. ಆದ್ದರಿಂದ ಧ್ವಜಸ್ತಂಭವನ್ನು ತೆರವುಗೊಳಿಸಿ ಕ್ರೀಡಾಂಗಣದ ಮುಂಭಾಗದಲ್ಲಿರುವ ಇಂದಿರಾ ಗಾಂಧಿ ಕಟ್ಟೆಯ ಬಳಿ ನಿರ್ಮಿಸುವುದು ಉತ್ತಮವಾಗಿದೆ. ಅಲ್ಲಿ ನಿರ್ಮಿಸಿದರೆ ಯಾವ ಕ್ರೀಡಾರ್ತಿಗಳಿಗೂ ತೊಂದರೆ ಆಗುವುದಿಲ್ಲ. ಜತೆಗೆ ಕ್ರೀಡಾಂಗಣದಲ್ಲಿನ ಇಂದಿರಾ ಗಾಂಧಿ ಕಟ್ಟೆಯನ್ನು ಸಹ ಅಭಿವೃದ್ಧಿಪಡಿಸಬೇಕು. ಕ್ರೀಡಾಂಗಣದಲ್ಲಿ ಅಪೂರ್ಣ ಅಭಿವೃದ್ಧಿ ಆಗಿದೆ. ಆದಷ್ಟು ಬೇಗನೆ ಈ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡಿ ಮೂಲ ನಕ್ಷೆಯಂತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net