ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ಮಳೆಯಾಗಿದ್ದು, ಹನಿಯ ಸಿಂಚನವಾಯಿತು.
ಜಿಲ್ಲೆಯಲ್ಲಿ ಹಲವು ದಿನಗಳಿಂದ ಬಿಸಿಲು ಹೆಚ್ಚಿದ್ದು, ಗುರುವಾರ ಸಂಜೆ ಮೋಡ ಕವಿದ ವಾತಾವರಣವಿತ್ತು. ತಂಪಾದ ಗಾಳಿ ಸಹ ಬೀಸಿತು. ನಗರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ತುಂತುರು ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ತಂಪಿನ ಅನುಭವವಾಯಿತು. ಕಮಲಾಪುರದಲ್ಲೀ ಕೂಡ ತುಂತುರು ಮಳೆಯಾಯಿತು.
ಬಿಸಿಲಿನ ಧಗೆ ಹೆಚ್ಚಿದ್ದರಿಂದ ಹಲವು ದಿನಗಳಿಂದ ಮನೆಗಳ ಒಳಗೆ ವಿಪರೀತ ಸೆಕೆಯಿದೆ. ಇದರಿಂದ ಬೇಸತ್ತ ಹಲವು ಜನರು, ಮನೆಯ ಹೊರಗಡೆ ಕುಳಿತುಕೊಳ್ಳುತ್ತಿದ್ದಾರೆ. ಗುರುವಾರ ಮಳೆ ಸುರಿದಿದ್ದರಿಂದ ಅವರೆಲ್ಲ ಖುಷಿಪಟ್ಟರು. ಕೆಲವರು, ಮಳೆಯಲ್ಲಿಯೇ ನಿಂತು ಸಂಭ್ರಮಿಸಿದರು.