

ಹರಪನಹಳ್ಳಿ: ಖಾಸಗಿ ಮೈಕ್ರೋ ಫೈನಾನ್ಸ್ ಕಂನಿಯವರ ಕಿರುಕುಳಕ್ಕೆ ತಾಲೂಕಿನ ಶಿವಪುರ ತಾಂಡಾದ ನಿವಾಸಿ ಎಂ.ರವಿನಾಯ್ಕ ಅವರು ಕುಟುಂಬ ಸಹಿತ ಊರು ಬಿಟ್ಟಿದ್ದಾರೆ.
ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ರವಿನಾಯ್ಕ 2022 ನವೆಂಬರ್ ತಿಂಗಳಲ್ಲಿ ದಾವಣಗೆರೆಯ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಮನೆ ನಿರ್ಮಾಣಕ್ಕೆ 6 ಲಕ್ಷ ರೂ. ಸಾಲ ಮಾಡಿದ್ದಾರೆ. ತಿಂಗಳಿಗೆ 9271 ರೂ.ನಂತೆ ಕಳೆದ ಆಗಸ್ಟ್ ತಿಂಗಳ ವರೆಗೆ ಕಂತುಗಳನ್ನು ಪಾವತಿಸಿದ್ದಾರೆ. ಆದರೆ, ಕಾರಣಾಂನತರದಿAದ ಉಪನ್ಯಾಸಕ ವೃತ್ತಿಯಿಂದ ಬಿಡುಗಡೆಯಾಗಿದ್ದಾರೆ. ಸಾಲದ ಕಂತು ಕಟ್ಟಲು ಸಮಸ್ಯೆ ಆಗಿದ್ದರಿಂದ ಫೈನಾನ್ಸ್ ಕಂಪನಿಯವರ ಬಳಿ ಕಾಲಾವಕಾಶಕ್ಕೆ ಮನವಿ ಮಾಡಿದ್ದಾರೆ. ಆದರೂ, ಕಳೆದ ಜೂನ್ ತಿಂಗಳಿAದ ಕಿರುಕುಳ ನೀಡುತ್ತಿದ್ದಾರೆ ಎಂದು ಹೆಂಡತಿ ಮಕ್ಕಳೊಂದಿಗೆ ಊರು ಬಿಟ್ಟು ಹರಪನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸ ಆಗಿದ್ದಾರೆ.
ರವಿನಾಯ್ಕ ಅವರ ತಾಂಡಾದ ಮನೆಯ ಗೋಡೆಗೆ ಫೈನಾನ್ಸ್ ಕಂಪನಿಯಿAದ ಈ ಆಸ್ತಿ ಅಡಮಾನ ಇಡಲಾಗಿದೆ ಎಂದು ಬರಯಲಾಗಿದೆ. ಹರಪನಹಳ್ಳಿಯ ಬಾಡಿಗೆ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದಾರೆ. ಲೀಗಲ್ ಅಡ್ವಕೇಟ್ ಸಮೇತ ಕಂತನ್ನು ಪಾವತಿಸಿ ಇಲ್ಲವಾದರೆ ಮನೆ ಬೀಗ ಹಾಕಿ ಜಪ್ತಿ ಮಾಡುತ್ತೇವೆ. ಗ್ರಾಮಸ್ಥರನ್ನು ಕೂಡಿಸಿ ಅವರ ಮುಂದೆಯೆ ಮನೆಯನ್ನು ಹರಾಜು ಹಾಕಲಾಗುತ್ತದೆ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸುವುದು, ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ. ಮಾನಸಿಕವಾಗಿ ಕುಗ್ಗಿ ಕುಟುಂಬಸ್ಥರು ದಿಕ್ಕು ತೋಚದಂತೆ ಆಗಿದೆ ಎಂದು ರವಿನಾಯ್ಕ ಆರೋಪಿಸುತ್ತಿದ್ದಾರೆ.