ಕಲಾವಿದರಿಗೆ ಪಕ್ಷ ಭೇದಯಿಲ್ಲ

ZAMIR
ಜಮೀರ್
Published on

ಹೊಸಪೇಟೆ: ಹಂಪಿ ಉತ್ಸವ ಕಳೆದ ಬಾರಿಗಿಂತ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ವೈದ್ಯರ ಸಲಹೆ ಪಡೆದು, ಒಂದು ತಾಸಿನಲ್ಲಿ ವಿಶೇಷ ವಿಮಾನದ ಮೂಲಕ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಹಂಪಿ ಉತ್ಸವಕ್ಕೆ ಬರುತ್ತಾರೆ ಎಂದರು.

ಬಿಜೆಪಿ ಪ್ರಚಾರ ಮಾಡಿದ್ದಕ್ಕೆ ನಟ ಸುದೀಪ್ ಗೆ ಆಹ್ವಾನ ನೀಡಿಲ್ವ ಎಂಬ ಪತ್ರರ‍್ತರ ಪ್ರಶ್ನೆಗೆ ಉತ್ತರಿಸಿದ ಸಚಿವ, ಕಲಾವಿದರಿಗೆ ಪಕ್ಷವಿಲ್ಲಾ. ನಾವು ಸುದೀಪ್ ಅವರನ್ನು ಕರೆದಿದ್ದೇವೆ. ಅವರು ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಶಿವಣ್ಣ ಅವರ ಆರೋಗ್ಯ ಸರಿಯಿಲ್ಲಾ. ಅಂದು ಆರೋಗ್ಯ ಚನ್ನಾಗಿದ್ದರೆ ಬರುವ ಸಾಧ್ಯತೆಯಿದೆ. ಕಳೆದ ಬಾರಿ ರ‍್ಶನ್ ಅವರು, ಬಂದಿದರು. ನನ್ ಅಭಿಮಾನದಿಂದ ಅವರೇ ಸ್ವಂತ ರ‍್ಚಿನಲ್ಲಿ ಬಂದಿದ್ದರು. ಎಂದರು.

ಮಹಾರಾಷ್ಟ್ರ ಗಡಿಯಲ್ಲಿ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ, ಕಂಡಕ್ಟರ್ ಮೇಲೆ ಹಲ್ಲೆ ಮಾಡೋದು ತಪ್ಪಲ್ವಾ? ನಾವು ಎಷ್ಟರಮಟ್ಟಿಗೆ ಸಹಿಸಿಕೊಳ್ಳಬೇಕು ಹೇಳಿ ನೋಡೋಣ? ನಾನು ಕೂಡ ಖಂಡಿಸಿದ್ದೇನೆ. ಗ್ಯಾರಂಟಿಯೋಜನೆಗಳು ನಿಲ್ಲಿಸೋಲ್ಲಾ, ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರಲ್ಲಾ ಗೃಹ ಲಕ್ಷಿ ಹಣ ರ‍್ತದೆ ಅಂತ. ಇಂಧನ ಇಲಾಖೆಯ ಹೊಸ ಆದೇಶ ವಿಚಾರ ತಪ್ಪು ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಜನ ಮುಂಗಡ ಹಣ ಕೊಟ್ಟು ನಂತರ ಪಡೆಯುವ ಆದೇಶವಿಲ್ಲಾ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net