ಶುಲ್ಕ ಮರುಪಾವತಿಗೆ ಅರ್ಜಿ

Published on

ಹೊಸಪೇಟೆ: ಈ ಸಾಲಿಗೆ ಎಸ್‌ಎಸ್‌ಪಿ ರಾಜ್ಯ ವಿದ್ಯಾರ್ಥಿವೇತನ ಯೋಜನೆಯಡಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಮತ್ತು ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅ.31 ಕೊನೆ ದಿನವಾಗಿದೆ.
https://ssp.postmatric.karnataka.gov.in/ (ಎಸ್.ಎಸ್.ಪಿ) ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://dom.karnataka.gov.in ವೆಬ್ ಸೈಟ್‌ಅನ್ನು ವೀಕ್ಷಿಸಿ ಅಥವಾ ಜಿಲ್ಲಾ ಕಚೇರಿ ಮತ್ತು ಜಿಲ್ಲಾ ಹಾಗೂ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ದೂರವಾಣಿ ಸಂಖ್ಯೆ: ಹೆಲ್ಪ್ಡೆಸ್ಕ್ -8277799990 (24/7), 8050435366, 9980237242, 7353696984, 849492781. ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net