ತಂದೆ ಆರೋಗ್ಯದಲ್ಲಿ ಏರುಪೇರಾದಾಗ ಅಲ್ಲಿಗೆ ಹೋಗಿದ್ದ ಹರಿಧರನ್ ಅವರನ್ನು ಮಾತನಾಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ಸೆಲ್ವಕುಟ್ಟಿ ನಿಧನರಾದರು. ಇತ್ತ ಶನಿವಾರ ಎಸ್ಸೆಸ್ಸಲ್ಸಿ ಪರೀಕ್ಷೆ ಇದ್ದುದರಿಂದ ಸಂಬಂಧಿಕರು ಕ್ಯಾಬ್ ಬುಕ್ ಮಾಡಿ ಹೊಸಪೇಟೆಗೆ ಕಳಿಸಿದ್ದಾರೆ. ಇತ್ತ ಶನಿವಾರ ಹರಿಧರನ್ ಎಸ್ಸೆಸ್ಸೆಲ್ಸಿಯ ಸಮಾಜ ವಿಜ್ಞಾನ ಪರೀಕ್ಷೆ ಎದುರಿಸುತ್ತಿದ್ದರೆ, ಅತ್ತ ತಮಿಳುನಾಡಿನಲ್ಲಿ ಅವರ ತಂದೆ ಅಂತ್ಯಸಂಸ್ಕಾರ ನಡೆದಿದೆ. ಪರೀಕ್ಷೆ ಮುಗಿದ ನಂತರ ಹರಿಧರನ್ ಮತ್ತೆ ತಮಿಳು ನಾಡಿಗೆ ತೆರಳಿದ್ದಾರೆ.