ಕಬ್ಬಿನ ಬೆಳೆಗೆ ಗೊಣ್ಣೆಹುಳು ಬಾಧೆ

11 MANJU 01
Published on

ಹೊಸಪೇಟೆ: ಈ ಬಾರಿ ಮುಂಗಾರು ಉತ್ತಮವಾಗಿದ್ದು, ಗುಣಮಟ್ಟದ ಇಳುವರಿ ನಿರೀಕ್ಷೆಯಲ್ಲಿದ್ದ ಕಬ್ಬಿನ ಬೆಳೆಗೆ ಗೊಣ್ಣೆಹುಳು ಬಾಧೆೆ ಕಾಣಿಸಿಕೊಂಡಿದ್ದು, ಬೆಳೆ ಒಣಗುತ್ತಿದೆ. ಬೆಳೆಗಾರರಿಗೆ ನಷ್ಟವಾಗುವ ಆತಂಕದಲ್ಲಿದ್ದಾರೆ.

ಗೊಣ್ಣೆಹುಳುಗಳು ಕಬ್ಬಿನ ಬೇರನ್ನು ತಿಂದು ಹಾಕಿರುವ ಪರಿಣಾಮ ತಾಲೂಕಿನ ಕಮಲಾಪುರ, ಮಲಪನಗುಡಿ, ನಾನಗೆನಹಳ್ಳಿ, ಹೂಸೂರು, ಮರಿಯಮ್ಮನಹಳ್ಳಿ ಸೇರಿದಂತೆ ಹೂವಿನಗಡಗಲಿ, ಬೊಮ್ಮನಹಳ್ಳಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಯಲ್ಲಿ ಬೆಳೆಯಲಾಗಿದ್ದ ಕಬ್ಬು ಒಣಗಿನಿಂತಿದೆ. ಕಮಲಾಪುರದ ಅರ್ಜುನ್ ಎಂಬ ರೈತನ ಮೂರು ಎಕರೆ ಕಬ್ಬಿನ ಹೊಲ ಸಂಪೂರ್ಣವಾಗಿ ಒಣಗಿ ನಿಂತಿದೆ. ಈಗಾಗಲೇ ಬೆಲೆ ಕುಸಿತದಿಂದ ಆತಂಕಕ್ಕೊಳಗಾಗಿರುವ ಕಬ್ಬು ಬೆಳೆಗಾರರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ಕಬ್ಬಿನ ನಾಟಿ ಸಮಯದಲ್ಲಿ ಹೆಕ್ಟೇರ್‌ಗೆ ೨೫ ಕೆ.ಜಿ.ಪೋರಟ್ ಅಥವಾ ಶೇ. ೫ ರಷ್ಟು ಫಿನಿಲಾಪಾಸ್ ಇಲ್ಲವೇ ಶೇ.೪ರಷ್ಟು ಕಾರ್ಬರಿನ್ ಪುಡಿಯನ್ನು ಮಣ್ಣಿಗೆ ಬೆರಸಿದ್ದರೆ ಗೊಣ್ಣೆಹುಳು ಬಾಧೆ ಬರುವುದಿಲ್ಲ, ಆದರೆ ರೈತರು ಈ ಯಾವ ಕ್ರಮವನ್ನು ಅನುಸರಿಸದ ಕಾರಣ ಮತ್ತು ತಮ್ಮ ಹೊಲಕ್ಕೆ ತಾವೇ ಹೋಗಿ ಕಾಳಜಿ ವಹಿಸದ ಕಾರಣ ಹುಳುಬಾಧೆ ವ್ಯಾಪಕವಾಗಿದೆ ಎಂದು ಅಕಾರಿಗಳು ಹೇಳುತ್ತಾರೆ.

ಈ ವಾರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹುಳುಬಾಧೆ ಹತೋಟಿ ಬರಬೇಕಯ. ಆದರೂ, ಕಬ್ಬಿನಲ್ಲಿ ಹುಳು ಬಾಧೆ ಕಾಣಿಸಿಕೊಳ್ಳುತ್ತಿದೆ. ರೈತರಿಗೆ ಈಗಾಗಲೇ ಹುಳು ಬಾಧೆ ನಿಯಂತ್ರಣಕ್ಕೆ ತರಬೇತಿ ನೀಡಲಾಗಿದೆ, ಎಲ್ಲ ರೈತರು ಸಾಮೂಹಿಕವಾಗಿ ಔಷ ಸಿಂಪಡಿಸಿದರೆ ಈ ಹುಳುಬಾಧೆ ಯಂತ್ರಿಸಬಹುದು ಎಂದು ಅಕಾರಿಗಳು ತಿಳಿಸಿದರು.

ನಿಯಂತ್ರಣ ಮಾಡುವುದು ಹೇಗೆ?

ಈಗಾಗಲೇ ಗೊಣ್ಣೆ ಹುಳು ಬಿದ್ದಿರುವ ಕಬ್ಬಿನ ಹೊಲಗಳಿಗೆ ಮೆಟರೈಜಿಯಂ ಜೈವಿಕ ಸಿಲಿಂದ್ರಗಳನ್ನು ಬಳಕೆ ಮಾಡಿ ಹತೋಟಿಗೆ ತರಬಹುದು. ಹುಳುಗಳು ಮಣ್ಣಿನಲ್ಲಿ ಇರುವುದರಿಂದ ಔಷಧಗಳನ್ನು ಸಿಂಪಡನೆ ಮಾಡುವುದುರಿಂದ ಅವು ಸಾಯುವುದಿಲ್ಲ. ಆದ್ದರಿಂದ ಒಂದು ಎಕರೆ ಕಬ್ಬಿನ ಗದ್ದೆಗೆ ಎರಡರಿಂದ ಎರಡುವರೆ ಮೆಟರೈಜಿಯಂ ಹಾಗೂ ಹಸಿ ಕಡಲೇ ಹಿಟ್ಟು, ಸಮಾನ ಬೆಲ್ಲವನ್ನು ೨೦೦ ಲೀಟರ್ ನೀರಿನಲ್ಲಿ ಒಂದು ವಾರಗಳ ಕಾಲ ಕೊಳೆಸಿ ನಂತರ ಕಬ್ಬಿನ ಸಾಲಿನಲ್ಲಿ ಹಾಕುವುದರಿಂದ ಹುಳುಗಳ ಹತೋಟಿಗೆ ತರಬಹುದು ಎಂದು ಅಕಾರಿಗಳು ತಿಳಿಸಿದರು.

ಕೆಲಕಡೆ ಮರಳು ಮೀಶ್ರಿತ ಮಣ್ಣ ಇರುವ ಪ್ರದೇಶದಲ್ಲಿ ಹಾಗೂ ನೀರನ್ನು ಸರಿಯಾಗಿ ಹಾಯಿಸದ ಹೊಲದಲ್ಲಿ ಹೆಚ್ಚಾಗಿ ಗೊಣ್ಣೆಹುಳು ಬಾಧೆ ಕಂಡು ಬಂದಿರಬಹುದು. ರೈತರು ಕಬ್ಬಿನ ನಾಟಿ ಸಂರ್ಧದಲ್ಲಿ ಸರಿಯಾದ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಹುಳುಬಾಧ ಹೆಚ್ಚಿದೆ. ಜೈವಿಕ ಶಿಲಿಂದ್ರಗಳನ್ನು ಸಿಂಪಡೆಣೆಯಿAದ ಹತೋಟಿಗೆ ತರಬಹುದು. ಕೃಷಿ ಇಲಾಖೆಯಿಂದ ರೈತರಿಗೆ ಎಲ್ಲಾ ರೀತಿಯ ಸಲಹೆಗಳನ್ನು ನೀಡಲಾಗುತ್ತದೆ. - ಟಿ.ಡಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕ, ವಿಜಯನಗರ ಕಬ್ಬು ಗೊಣ್ಣೆಹುಳು ಬಾಧೆ ಯಿಂದ ಸಂಪೂರ್ಣ ಒಣಗಿ ನಿಂತಿದೆ. ಹುಳುಬಾಧೆ ತಡೆಯಲು ಎಕರೆಗೆ ಸುಮಾರು ೧೦ ರಿಂದ ೧೫ ಸಾವಿರ ವೆಚ್ಚಮಾಡಿ ನಾನಾ ಔಷಯನ್ನು ಸಿಂಪಡಿದ್ದೇವೆ, ಆದರೂ ಹುಳುಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಸಂಪೂರ್ಣ ಒಣಗಿ ಹೋಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. - ಅರ್ಜುನ, ಕಮಲಾಪುರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net