ರೈತರ ವಿವಿಧ ಬೇಡಿಕೆ ಈಡೇರಿಸಲಿ

14 MANJU 02
Published on

ಹೊಸಪೇಟೆ: ದೆಹಲಿ ಚಲೋ ನಿಮಿತ್ತ ಎಲ್ಲಾ ಬೆಳೆಗಳನ್ನು ಸರ್ಕಾರವೇ ಖರಿಧಿಸಬೇಕು ಎಂದು ಆಗ್ರಹಿಸಿ ಎಐಕೆಕೆಎಂಎಸ್ ರೈತ ಸಂಘಟನೆಯಿAದ ತಾಲೂಕಿನ ಬಸವನ ದುರ್ಗಾದಲ್ಲಿ ಶುಕ್ರವಾರ ಬಿತ್ತಿಚಿತ್ರ ಹಿಡಿದು ರೈತರಲ್ಲಿ ಜಾಗೃತಿ ಮೂಡಿಸಲಾಯಿತು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಗುರಳ್ಳಿ ರಾಜ ಮಾತನಾಡಿ, ರೈತರ ಎಲ್ಲಾ ಬೆಳೆಗಳಿಗೆ 2+50ರ ಆಧಾರದಲ್ಲಿ ಕನಿಷ್ಠ ಬೆಂಬಲ ಬೆಲೆ ಯನ್ನು ಕಾನೂನು ಬದ್ಧಗೊಳಿಸಬೇಕು, 2023ರ ವಿದ್ಯುತ್ ಕಾಯ್ದೆ ರದ್ದುಗೊಳಿಸಬೇಕು. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ವ್ಯವಸ್ಥೆಯ ಜಾರಿ ಮಾಡಬೇಕು ಎಂಬ ಬೇಡಿಕೆಗಳು ಸೇರಿದಂತೆ ಬೃಹತ್ ಮಟ್ಟದ ದೆಹಲಿ ಚಲೋ ಹೋರಾಟ ಹಮ್ಮಿಕೊಂಕೊಳ್ಳಲಾಗಿದೆ. ಇದರ ಪೂರಕವಾಗಿ ಎಲ್ಲಾ ಹಳ್ಳಿ, ತಾಲೂಕು ಜಿಲ್ಲಾ ಮಟ್ಟದ ಸಭೆ, ಸಮಾವೇಶಗಳ ಮೂಲಕ ರೈತರಿಗೆ ಸಂಘಟಿಸಲಾಗುತ್ತಿದೆ. ಈ ಬೇಡಿಕೆ ಪ್ರತಿಯೊಬ್ಬ ರೈತನ ಜೀವನಕ್ಕೆ ಸಂಬAಧಿಸಿದ ವಿಷಯವಾಗಿದೆ. ಎಲ್ಲಾ ರೈತರು ಮತ್ತು ಕೃಷಿ ಕಾರ್ಮಿಕರು ಒಟ್ಟಾಗಿ ಈ ಹೋರಾಟವನ್ನು ಬೆಳೆಸಲು ಮುಂದಾಗಬೇಕು ಎಂದರು.

ರೈತರಾದ ಕಾಶಿನಾಥ್, ವಿ. ಚೆನ್ನಬಸಪ್ಪ, ಕೆ.ಹನುಮಂತಪ್ಪ, ಸಿ.ಬರ್ಮಪ್ಪ, ಎಂ.ಮಾನಪ್ಪಾ, ಎಚ್.ಗಾಳೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net