ರೈತ ಸಂಘದ ಮಹಿಳಾ ಘಟಕ ರಚನೆ

news
ಹೊಸಪೇಟೆ ಅಮರಾವತಿ ಪ್ರವಾಸಿ ಮಂದಿರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಘಟನೆಯ ತಾಲೂಕು ಮಹಿಳಾ ಘಟಕ ರಚನೆ ಆಯಿತು.
Published on

ಹೊಸಪೇಟೆ: ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಘಟನೆ ಜಿಲ್ಲಾದ್ಯಾಕ್ಷ ಸಿ.ಎ.ಗಾಳೆಪ್ಪ ನೇತೃತ್ವದಲ್ಲಿ ತಾಲೂಕು ಮಹಿಳಾ ಘಟಕ ರಚಿಸಲಾಯಿತು.

ಜಿಲ್ಲಾದ್ಯಾಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ರೈಷಿಯಲ್ಲಿ ಮಳೆಯರು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ರೈತರ ಬಗ್ಗೆ ಯಾರಿಗೂ, ಯಾವ ಪಕ್ಷಗಳಿಗೂ ಕಾಳಜಿ ಇಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ವಿಫಲವಾಗಿದೆ. ರೈತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ವಿದ್ಯಾವಂತರು ಸೇರಿದಂತೆ ಗ್ರಾಮೀಣ ಜನರ ವಲಸೆ ಹೆಚ್ಚಿದೆ. ಆಳುವ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಆಹಾರ ಉತ್ಪಾದನೆ ಸೇರಿದಂತೆ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಗೌರವಧ್ಯಕ್ಷ ಯಂಕೋಬಪ್ಪ, ದೇಶಕ್ಕೆ ಸ್ವಾತಂತ್ರ‍್ಯ ಬಂದು ಇಷ್ಟು ವರ್ಷಗಳಾದರೂ ರೈತರ ಸಮಸ್ಯೆ ಪರಿಹರಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಯುವಜನತೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಬೀನಾರೂಪಾಲತ (ಅಧ್ಯಕ್ಷೆ), ಕೆ.ರಾಧಾ ರಾಮಪ್ಪ (ಗೌರವ ಅಧ್ಯಕ್ಷೆ), ವಿನುತಾ ಉರ್ಫ್ ರೂಪ ಹಾಗೂ ರೇಣುಕಾಬಾಯಿ (ಉಪಾಧ್ಯಕ್ಷರು), ಮಹಾಲಕ್ಷ್ಮಿ ಮತ್ತು ಕೆ.ಸುಮಾ (ಪ್ರಧಾನ ಕಾರ್ಯದರ್ಶಿ), ಬಿ.ಪೂರ್ಣಿಮಾ ( ಕಾರ್ಯಧರ್ಶಿ ), ರೇಣುಕಾ, ಜಿ. ಪಾರ್ವತಿ (ಜಂಟಿ ಕಾರ್ಯದರ್ಶಿ) ಬಿ.ಅನಿತಾ (ಸಹ ಸಂಚಾಲಕಿ), ವಿ.ಎಂ.ಶೋಭಾ (ಆಪ್ತಸಹಾಯಕಿ) ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net