

ಹೊಸಪೇಟೆ: ಸಿದ್ದರಾಮಯ್ಯ ಮಂಡಿಸಿದ ಬಜಾಟ್‌ನಲ್ಲಿ ರೈತರಿಗೆ ಲಾಭ ಇಲ್ಲ. ರೈತರ ಬಳಸುವ ಉಪಕರಣಗಳಿಗೆ ಸಬ್ಸಿಡಿ ನೀಡಿ ಕಂಪನಿಗಳಿಗೆ ಲಾಭ ಮಾಡುವುದಕ್ಕಾಗಿ ಈ ಬಜೆಟ್ ಮಂಡಿಸಲಾಗಿದೆ ಎಂದು ರೈತ ಸಂಘ ಹಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನವ ಕರ್ನಾಟಕ ನಿರ್ಮಾಣ ಸಮಿತಿಯಿಂದ ನಗರದ ಪಂಪಾ ಕಲಾಮಂದಿರದಲ್ಲಿ ಶುಕ್ರವಾರ ಜನತಾ ಪ್ರಣಾಳಿಕೆ ಉದ್ಘಾಟಿಸಿ ಮಾತನಾಡಿದರು.
ರೈತರು ಇಲ್ಲಿಯ ವರೆಗೆ ಆರ್ಥಿಕವಾಗಿ ಅಭಿವೃದ್ಧಿಯಾಗಿಲ್ಲ. ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆ ಜಾರಿಗೆ ತರಬೇಕು. 20 ವರ್ಷದ ಹಿಂದೆ ಸ್ವಾಮೀನಾಥನ್ ನೀಡಿರುವ ವರದಿ ಜಾರಿಗೆ ಬಂದರೆ ರೈತರಗೆ ಕನಿಷ್ಠ ನ್ಯಾಯಸಿಗುತ್ತೆ. ಸಿದ್ದರಾಮಯ್ಯನ ಬಜೆಟ್‌ನಲ್ಲಿ ರೈತರಿ, ಬಡವರಿಗೆ ಅನ್ಯಾಯವಾಗಿದೆ. ಸರ್ಕಾರ ನಾಗರೀಕ ಸಮಾಜ ಕಟ್ಟಲು ಮುಂದಾಗಬೇಕು ಎಂದರು.
ಎಐಬಿಎಸ್‌ಪಿ ಮುಖಂಡ ಗೋಪಿನಾಥ ಮಾತನಾಡಿ, ಯಾವ ಸರ್ಕಾರಗಳು ಬಂದರೂ ರೈತರಿಗೆ ಕಷ್ಟ ತಪ್ಪಿದ್ದಲ್ಲ, ಪಕ್ಷಗಳು ಚುನಾವಣೆ ಸಮಯದಲ್ಲಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಾರೆ. ಅದರಲ್ಲಿ ಬರಿ ಸುಳ್ಳುಗಳಿಂದ ಕೂಡಿರುತ್ತದೆ. ಜನರ ಮತವನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಾರೆ. ಸರ್ಕಾರ ರಚನೆಯಾದ ನಂತರ ಇವೆಲ್ಲವನ್ನೂ ಮರೆತು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳು ತೆರೆಯಲು ಪ್ರೇರೇಪಿಸುತ್ತಾರೆ. ಕೃಷಿ ಮಾರುಕಟ್ಟೆಯಲ್ಲಿ ದಲ್ಲಾಳಿ ಹಾವಳಿ ಹೆಚ್ಚಾಗಿದೆ. ಇದು ನಿಲ್ಲದಿದ್ದಲ್ಲಿ ನವ ಕರ್ನಾಟಕ ನಿರ್ಮಾಣ ಸಮಿತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರಮುಖರಾದ ಹನುಮಂತಪ್ಪ ಹೊಳೆಯೂರು, ಟಿ.ನಾಗರಾಜ, ಬಸವರಾಜ, ಖಾಜಾ ಹುಸೇನ್ ನಿಯಾಜಿ, ಜಾಹಿದ್ದೀðನ್, ಎನ್.ಜಡೆಪ್ಪ, ಸಣ್ಣಕ್ಕಿ ರುದ್ರಪ್ಪ, ಶ್ರೀನಿವಾಸ ಶಂಕರ್ ಗೌಡ, ವಿ.ಟಿ.ನಾಗರಾಜ, ಎ.ಚಿದಾನಂದ ಇತರರಿದ್ದರು.