

ಹೊಸಪೇಟೆ: ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದ್ದು, ರೈತರು ಬಿತ್ತನೆ ಮಾಡಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಗಾಂಧಿಚೌಕ್‌ನಲ್ಲಿ ಸೋಮವಾರ ರೈತರ ಹುತ್ಮಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಈಗ ಯೂರಿಯಾ, ಗೊಬ್ಬರ, ರೈತರಿಗೆ ತುಂಬಾ ಅಭಾವವಾಗಿರುತ್ತದೆ. ಈಕೂಡಲೇ ರೈತರಿಗೆ ಸಮರ್ಪಕವಾಗಿ ಯೂರಿಯಾ, ಗೊಬ್ಬರವನ್ನು ಪೂರೈಸಬೇಕು. ತುಂಗಭದ್ರಾ ಜಲಾಶಯದ 19ನೇ ಕ್ರಷ್‌ಗೇಟ್ ಮುರಿದು ಹೋಗಿ ವರ್ಷ ಕಳೆಯುತ್ತಿದೆ. ಇಲ್ಲಿಯವರೆಗೂ ಅದನ್ನು ಸರಿಪಡಿಸದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. 133 ಟಿ.ಎಂ.ಸಿ. ಜಲಾಶಯದಲ್ಲಿ 23 ಟಿ.ಎಂ.ಸಿ. ನೀರು ಹೂಳು ತುಂಬಿದೆ. ಈಗ ಶೇ.80 ಜಲಾಶೈಕ್ಕೆ ಭರ್ತಿ ಮಾಡಲು ಮಂಡಳಿ ತಿರ್ಮಾನಿಸಿದೆ. ಇದರಿಂದ ರೈತರಿಗೆ ಎರಡು ಬೆಳೆ ನೀರು ಸಾಕಾಗುವುದಿಲ್ಲ. ಆದಷ್ಟು ಬೇಗ ಎಲ್ಲಾ ಗೇಟ್‌ಗಳನ್ನು ಕೂಡಲೇ ಸರಿಪಡಿಸಿ ರೈತರಿಗೆ 02 ಬೆಳೆಯನ್ನು ಬೆಳೆಯಲ್ಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ಈ ಭಾಗದ ರೈತರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖವಾಗಿ ದಶಕದ ಬೇಡಿಕೆಯಾಗಿದ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಹಲವು ಬಾರಿ ಸಿಎಂ, ಸಚಿವರು, ಶಾಸಕರಿಗೆ ಸೇರಿದಂತೆ ಅಧಿಕಾರಿ ವರ್ಗಗಗಳಿಗೆ ನೀಡಿದ ಮನವಿ ಫಲಿಸದೇ ಇರುವುದು ವಿಪರ್ಯಾಸ. ಮೇ 20 ರಂದು ನಡೆದ ಸಾಧನಾ ಸಮಾವೇಶದಲ್ಲಿ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಕಾರ್ಖಾನೆ ಸ್ಥಾಪನೆಗೆ 02 ತಿಂಗಳ ಆಶ್ವಾಸನೆ ನೀಡಿದರು. ಆದರೆ, ಈ ವರೆಗೆ ಪ್ರಯೋಜವಾಗಿಲ್ಲ. ಕಾರ್ಖಾನೆಯನ್ನು ನಂಬಿಕೊAಡ ಕೂಲಿ ಕಾರ್ಮಿಕರು ಮತ್ತು ರೈತರು ಹೊಲಸೆ ಹೋಗುತ್ತಿದ್ದಾರೆ. ದಶಕಗಳಿಂದ ನಷ್ಟದಲ್ಲಿ ಬೇರೆಡೆ ಕಬ್ಬು ಸಾಗಾಣೆ ಮಾಡಲಾಗುತ್ತಿದೆ. ಆದ್ದರಿಂದ ಈ ಭಗದಲ್ಲಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಜಡೆಪ್ಪ, ಪ್ರಮುಖರಾದ ಆರ್.ಆರ್.ತಾಯಪ್ಪ, ವಿ.ಗಾಳೇಪ್ಪ, ಮೂರ್ತಿ, ರೇವಣಸಿದ್ದಪ್ಪ, ಕೆ.ಜಹಿರುದ್ದೀನ್, ಕೆ.ಸುರೇಶ್, ಕೆ.ಮಲ್ಲಿಕಾರ್ಜುನ, ಎಲ್.ನಾಗೇಶಿ, ಜಿ.ಹನುಮಂತರೆಡ್ಡಿ, ಎಂ.ರ‍್ರಿಸ್ವಾಮಿ, ನಲ್ಲಾಪುರ ಬಸವರಾಜ್, ಜೆ.ಕೊಟ್ರಪ್ಪ, ಅಯ್ಯಣ್ಣ, ಸತೀಶ, ಹೆಚ್.ಹನುಮಂತ ರೆಡ್ಡಿ, ಅಂಕ್ಲೇಶ್, ಜಾಕೀರ್ ಇತರರಿದ್ದರು.